ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ನಮ್ಮ ಹಿಂದಿನ ತಲೆಮಾರಿನವರ ಜಾಣ್ಮೆಯ ಸತ್ವವೇ ಗಾದೆ. ಗಾದೆಗಳನ್ನು ವೇದಕ್ಕಿಂತಲೂ ಮಿಗಿಲು ಎನ್ನಬಹುದು. ಗಾದೆಗಳಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.
ಒಂದು ಮಡಿಕೆಯನ್ನು ಮಾಡಲು ಕುಂಬಾರನಿಗೆ ತುಂಬ ಸಮಯ ಬೇಕು. ಅದೇ ಮಡಿಯನ್ನು ನಾವು ಒಂದು ಕೋಲಿಂದ ಹೊಡೆದರೆ ಕ್ಷಣ ಕಾಲದಲ್ಲಿ ಆ ಮಡಿಕೆ ಒಡೆದು ಹೋಗುತ್ತದೆ. ಕುಂಬಾರನ ಅಷ್ಟು ಶ್ರಮ, ಕ್ಷಣ ಮಾತ್ರದಲ್ಲಿ ವ್ಯರ್ಥವಾಗಿ ಬಿಡುತ್ತದೆ.
ಏನಾದರೊಂದು ಕಟ್ಟುವುದು ಕಷ್ಟದ ಕೆಲಸ ಹಾಗು ತುಂಬ ಸಮಯ ಅದರ ಬಗ್ಗೆ ಯೋಚಿಸಿ, ಅದರ ಬಗ್ಗೆ ಕೆಲಸ ಮಾಡಬೇಕಾಗುತ್ತದೆ. ಅದೇ ವಸ್ತುವನ್ನು ಹಾಳು ಮಾಡಬೇಕಾದರೆ ಕೆಲವೇ ನಿಮಿಷಗಳು ಸಾಕು.
ನಮಗೆ ಯಾವುದಾದರು ವಸ್ತು ಅಷ್ಟೇನೂ ಮುಖ್ಯವಲ್ಲ ಅದನ್ನು ಎಸೆಯಬಹುದು ಎಂದು ಅನ್ನಿಸಿದರೆ, ಅದನ್ನು ಮಾಡಲು ಆದ ಕಷ್ಟದ ಯೊಚಿಸಬೇಕು. ಯಾವುದೇ ವಷ್ಟುವನ್ನು ಹೀಯಾಳಿಸುವಾಗ, ಅದರ ಪ್ರಾಮುಖ್ಯತೆ ಅದನ್ನು ಮಾಡಿದವರ ಕಣ್ಣಿಂದ ನೋಡಬೇಕು.