ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಹಾ!!! ಉಪ್ಪನ್ನು ಯಾರಾದರೂ ತಿನ್ನುತ್ತಾರಾ? ಎಂದು ನೀವು ಬಗೆಯುತ್ತಿದ್ದೀರಾ? ಇಲ್ಲಿ ಉಪ್ಪೆಂದರೆ ಊಟ, ಉಪಕಾರ, ಸಹಾಯ ಎಂದು ತಿಳಿಯ ಬೇಕು. ಎರಡು ಬಗೆಯುವುದು ಎಂದರೆ ಮೋಸ ಮಾಡುವುದು. ಮೋಸವು ನೇರವಾದದ್ದಿರಬಹುದು ಅಥವಾ ಕೆಟ್ಟದನ್ನು ಯೋಚಿಸುವುದೆಂದು ಪರಿಗಣಿಸಬಹುದು.
ಒಂದು ವಾಕ್ಯದಲ್ಲಿ ಹೇಳಬೇಕೆಂದರೆ: ಯಾರಿಂದ ನಾನು ಸಹಾಯವನ್ನು ಬೆಡೆದುಕೊಳ್ಳುತ್ತೇವೆಯೋ ಅವರಿಗೆ ಮೋಸ ಮಾಡಬಾರದು ಎಂದು ಗಾದೆ ಹೇಳುತ್ತದೆ.
ನಮ್ಮ ಕಷ್ಟಕಾಲದಲ್ಲಿ ನಮಗೆ ಸಹಾಯ ಮಾಡುವವರೆ ತುಂಬಾ ವಿರಳ. ಅದರಲ್ಲೂ ಸಹಾಯ ಮಾಡಿದರೆಂದರೆ ಅಂತವರ ಮನಸ್ಸು ತುಂಬಾ ದೊಡ್ಡದೆಂದು ಪರಿಗಣಿಸ ಬೇಕು. ಹಾಗೆ ಉಪಕಾರ ಮಾಡಿದವರಿಗೆ ನಾವು ಪ್ರತಿ ಉಪಕಾರ ಮಾಡಬೇಕೇ ಹೊರತು ಮೋಸ ಮಾಡುವುದು ಸಾರಿಯಲ್ಲ. ನಾವು ಅಂಥವರಿಗೆ ಚಿರ ಋಣಿಯಾಗಿರಬೆೇಕು. ಎಂದಿಗೂ ಅವರ ಸಹಾಯವನ್ನು ಮರಿಯ ಬಾರದು.
Kommentare