top of page

Our Recent Posts

Archive

Tags

Search

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೆೇಕು

  • kannadambalge
  • Aug 3, 2021
  • 1 min read

ನೀವು ಎಂದಾದರೂ ಬರೀಯ ಉಪ್ಪನ್ನು ತಿಂದಿದ್ದೀರಾ? ಇಲ್ಲವಾದಲ್ಲಿ ಇವತ್ತೆ ಪ್ರಯತ್ನಸಿ. ಉಪ್ಪು ಎಷ್ಟು ಕಟುವಾಗಿರುತ್ತದೆಂದರೆ ಅದನ್ನು ತಿಂದ ಬಳಿಕ ನೀರು ಬೇಕೆಂದನಿಸುವುದು ಸಹಜ. ನೀರು ಕುಡಿಯದಿದ್ದರೆ ತುಂಬಾ ದಾಹವಾಗುತ್ತದೆ. ನೀರ ಸಿಗುವ ತನಕ ಮನಸ್ಸು ಶಾಂತವಾಗುವುದಿಲ್ಲ. ತುಂಬಾ ಚಡಪಡಿಕೆ ಯಾಗುತ್ತದೆ.


ನೀರು ಕುಡಿದಮೇಲೆ ಮನಸ್ಸಿಗೆ ಸಮಾಧಾನ, ಉಪ್ಪಿನ ಕಟುವು ಕರಗಿ ಹಾಯ್ ಎಂದೆನಿಸುತ್ತದೆ.

ಆದ್ದರಿಂದ ಉಪ್ಪನ್ನು ತಿಂದವನು(ಳು) ನೀರು ಕುಡಿಯಲೇ ಬೇಕು.

ಓಹ್! ಇದೆಂಥಾ ಗುಟ್ಟನ್ನು ಗಾದೆ ಹೇಳುತ್ತದೆ? ನಮಗೆಲ್ಲಾ ಗೊತ್ತಿರುವುದೇ ಅಲ್ಲವೇ? ಎಂದು ನಿಮಗನಿಸುವುದಲ್ಲವೆ?


ಉಪ್ಪನ್ನು ತಪ್ಪು ಕಾರ್ಯಗಳಿಗೆ ಹೋಲಿಸಿ ಈ ಗಾದೆಯು ಜೀವನದ ಸತ್ಯವನ್ನು ಹೇಳುತ್ತದೆ. ನಮ್ಮ ನಡತೆಯ ಬಗ್ಗೆ ನಮಗೆ ಮಾರ್ಗದರ್ಶನ ನೀಡುತ್ತದೆ.


ತಪ್ಪು ಕೆಲಸವನ್ನು ಮಾಡಿದಾತ ಅದರ ಪರಿಣಾಮವನ್ನು ಅನುಭವಿಸಲೇ ಬೇಕು. ಆ ಕಾರ್ಯಕ್ಕೆ ಶಿಕ್ಷೆಯನ್ನು ಪಡೆಯುವುದು ಖಂಡಿತ. ಅವನು ಮಾಡಿದ ತಪ್ಪಿನ ಫಲ ಕರ್ಮದ ರೂಪದಲ್ಲಿ ಅವನ ಬಳಿ ಹಿಂತಿರುಗಿ ಬರುವುದರಲ್ಲಿ ಸಂಶಯವೇ ಇಲ್ಲ.


ಈ ಮಾತನ್ನು ನಿಯಮವೆಂದೇ ತಿಳಿದುಕೊಂಡಲ್ಲಿ ನಮ್ಮ ನಡತೆ ಕೆಟ್ಟದಾರಿ ಹಿಡಿಯುವ ಪ್ರಮೇಯವೇ ಬರುವುದಿಲ್ಲ. ಕೆಟ್ಟ ಆಲೋಚನೆಗಳು ಬಂದಲ್ಲಿ ಅವುಗಳನ್ನು ಕಾರ್ಯ ರೂಪಕ್ಕೆ ತರುವಾಗ, ಮುಂದೆ ಇದರ ಫಲವನ್ನು ಅನುಭವಿಸುವುದು ಕಟ್ಟಿಟ್ಟ ಬುತ್ತಿ ಎನ್ನುವ ಯೋಚನೆ ನಮ್ಮನ್ನು ಮುಂದೆ ಹೋಗದಂತೆ ತಡಿಯುತ್ತದೆ.


ಈ ಗಾದೆಯು ಸರ್ವ ಕಾಲಕ್ಕೆ ಸತ್ಯ. ಈ ಕ್ಷಣಕ್ಕೆ ತಪ್ಪುಗಾರನಿಗೆ ಶಿಕ್ಷೆ ದೊರಕದಿದ್ದರೂ, ಅವನು ತನ್ನ ಕೆಲಸದ ಫಲದಿಂದ ಪಾರಾಗುವುದು ಅಸಾಧ್ಯವೆಂದು ಈ ಗಾದೆ ಸೂಚ್ಯವಾಗಿ ತಿಳಿ ಹೇಳುತ್ತದೆ.




Comments


Follow us 

  • Facebook

Contact

Address

Bengaluru, Karnataka, India

©2020 by kannadambalge. Proudly created with Wix.com

bottom of page