ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?
ನಮ್ಮ ಹಿಂದಿನ ತಲೆಮಾರಿನವರ ಜಾಣ್ಮೆಯ ಸತ್ವವೇ ಗಾದೆ. ಗಾದೆಗಳನ್ನು ವೇದಕ್ಕಿಂತಲೂ ಮಿಗಿಲು ಎನ್ನಬಹುದು. ಗಾದೆಗಳಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.
ಒಂದು ಗಿಡ ಬೆಳೆದು ಮರವಾದ ಮೇಲೆ ಅದರ ಅಂಕು ಡೊಂಕುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಏನಾದರೂ ಬದಲಿಸ ಬೇಕೆಂದಿದ್ದರೆ, ಅದು ಗಿಡವಾಗಿದ್ದಾಗಲೇ ಮಾಡಬೇಕು.
ಒಂದು ಮಗು ಬೆಳೆದು ದೊಡ್ಡವನಾಗಿ ಒಳ್ಳೆಯ ಪ್ರಜೆ ಆಗಬೇಕಿದ್ದರೆ, ಅವನಲ್ಲಿ ಒಳ್ಳೆಯ ಸ್ವಭಾವವನ್ನು ಸಣ್ಣ ವಯಸ್ಸಿನಿಂದಲೇ ಬೆಳೆಸಬೇಕು. ದೊಡ್ಡವನಾದ ಮೇಲೆ ಸರಿಪಡಿಸಿಕೊಳ್ಳಲು ಸಧ್ಯವಿಲ್ಲ. ಆದ್ದರಿಂದಲೇ ಶಾಲಾ ವಿದ್ಯಾರ್ಥಿ ಜೀವನದಿಂದಲೇ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು.
ಯಾವುದೇ ಕೆಟ್ಟ ಅಭ್ಯಾಸವನ್ನು, ಅದರ ಹೊಸತರಲ್ಲೇ ಇಲ್ಲಿಸಲು ಪ್ರಯತ್ನಿಸಬೇಕು. ಆ ಅಭ್ಯಾಸವು ಹಾಸುಹೊಕ್ಕಾದಮೇಲೆ ಬಿಡಬೇಕೆಂದರೆ ಕಷ್ಟ ಸಾಧ್ಯ. ಆದೆ ಸ್ವಲ್ಪವೇ ಪ್ರಯತ್ನದಿಂದ ಮೊದಲ ಸಮಯದಲ್ಲಿ ಸರಿಪಡಿಸಿಕೊಳ್ಳ ಬಹುದು.
ಚಿಕ್ಕ ವಯಸ್ಸಿನಲ್ಲಿ ಮನುಷ್ಯನ ದೇಹ, ಮನಸ್ಸು ಮೃದುವಾಗಿದ್ದು, ಯಾವುದೇ ಅಭ್ಯಾಸವನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು. ಅದೇ ದೊಡ್ಡವನಾದಮೇಲೆ ತುಂಬ ಪ್ರಯತ್ನ ಪಟ್ಟರೆ ಮಾತ್ರ ಅದರಿಂದ ಹೊರಗೆ ಬರಲು ಸಾಧ್ಯ.