ಊಟಬಲ್ಲವನಿಗೆ ರೋಗವಿಲ್ಲ, ಮಾತುಬಲ್ಲವನಿಗೆ ಜಗಳವಿಲ್ಲ.
- kannadambalge
- Mar 16, 2018
- 1 min read
ನಮ್ಮ ಹಿಂದಿನ ತಲೆಮಾರಿನವರ ಜಾಣ್ಮೆಯ ಸತ್ವವೇ ಗಾದೆ. ಗಾದೆಗಳನ್ನು ವೇದಕ್ಕಿಂತಲೂ ಮಿಗಿಲು ಎನ್ನಬಹುದು. ಗಾದೆಗಳಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.
ನಾವು ಎಂಥಾ ವಸ್ತುವನ್ನು ಸೇವಿಸಿದರೆ ನಮ್ಮ ದೇಹಕ್ಕೆ ಒಳ್ಳೆಯದು. ಯಾವ ವಸ್ತುವಿನಲ್ಲಿ ಒಳ್ಳೆಯ ಸತ್ವವಿದೆ, ಯಾವುದು ನಮ್ಮ ದೇಹಕ್ಕೆ ಹಾನಿಕರ ಎನ್ನುವುದನ್ನು ತಿಳಿದು ತಿಂದರೆ, ನಮ್ಮ ಆರೋಗ್ಯದ ಸ್ಥಿತಿ ಚೆನ್ನಗಿರುತ್ತದೆ. ನಮ್ಮ ದೇಹಕ್ಕೆ ಅವಶ್ಯಕವಾಗಿರುವ ವಸ್ತುವನ್ನು ಬಳಸಿದರೆದರಷ್ಟೇ ನಮಗೆ ಯಾವ ರೋಗದ ಭಯವಿರುವುದಿಲ್ಲ.
ಹಾಗೆ ನಾವು ಪರಿಸ್ಥಿತಿದೆ ಅನುಗುಣವಾಗಿ ನಮ್ಮ ಮಾತನ್ನು ಬಳಸಿದರೆ ನಮಗೆ ಯಾರಲ್ಲೂ ವೈಮನಸ್ಸು ಬೆಳೆಯುವುದಿಲ್ಲ. "ಮಾತು ಬೆಳ್ಳಿ, ಮೌನ ಬಂಗಾರ" ಎನ್ನುವಂತೆ, ನಮ್ಮ ಮಾತನ್ನು ಮಿತವಾಗಿ ಬಳಸಿ ಎಲ್ಲರಲ್ಲಿ ಒಳ್ಳೆಯ ಸಂಭಂದವನ್ನು ಬೆಳೆಸ ಬಹುದು. ಕಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ಮಾತುಗಳೇ ನಮಗೆ ಆಧಾರ. ಸಂಧರ್ಭಕ್ಕೆ ಅನುಸಾರವಾಗಿ ಮಾತುಗಳು ನಡೆದರೆ ಒಳ್ಳೆಯ ಫಲಿತಂಶವೇ ದೊರಕುತ್ತದೆ.