top of page

Our Recent Posts

Archive

Tags

ಅತಿ ಆಸೆ ಗತಿಗೇಡು


ಆಸೆ ಎನ್ನುವುದು ಮನುಷ್ಯನಿಗೆ ಸಹಜವಾಗಿಯೇ ಇರುವ ಗುಣ. ಅಷ್ಟು ಸಿಕ್ಕಿದರೆ, ಮತಷ್ಟು ಬೇಕೆಂಬ, ಆಸೆ, ಇನ್ನಷ್ಟು ಬೇಕೆಂಬ ಆಸೆ. ಆಸೆಯೂ ಮೇಥಿ ಮೀರಬಾರದು. ಅತಿಯಾದರೆ ನಮಗೆ ಒಳ್ಳೆಯದಲ್ಲ ಎನ್ನುವುದು ಈ ಗಾದೆಯ ಸಂದೇಶ. ನಮಲ್ಲಿ ಇರುವುದಲ್ಲಿ ನಮಗೆ ಸಂತ್ರಿಪ್ತಿ ಇರಬೇಕು. ನಾವು ಬೆಳೆಯಬೇಕು, ಇನ್ನು ಪಡೆಯ ಬೇಕು ಎನ್ನುವ ಛಲ ಇರಬೇಕು. ಆದರೆ ಅಡಿಗರು ಅವರು ಹೇಳಿದಂತೆ "ಇರಿವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ". ಈ ತುಡಿತವು ನಮ್ಮನ್ನು ಒಳ್ಳೆಯ ಕೆಲ್ಸವಕ್ಕೆ ಪ್ರೆಪರೇಪಿಸಿದರೆ ಒಳ್ಳೆಯದು. ಆದರೆ ಅತಿ ಆಸೆಯಿಂದ ನಮ್ಮ ಮನಸ್ಸು ಕೆಟ್ಟ ಕೆಲಸಮಾಡಲು ನಾಚುವುದಿಲ್ಲ. ಆಸೆಯು ಮಿತಿ ಮೀರಿ ಹೋದರೆ ಮನುಷ್ಯನ ವರ್ತನೆ ಬದಲಾಗುತ್ತದೆ. ಅವನು ಕಳ್ಳತನ, ಕೊಲೆ, ದರೋಡೆ ಮಾಡಬೇಕಾಗುತ್ತದೆ. ಕೊಟ್ಟ ಕೊನೆಯಲ್ಲಿ ಅವನಿಗೆ ಒಳ್ಳೆಯಾ ಪ್ರತಿಫಲ ಸಿಗದೆ, ಅವನು ಕಷ್ಟಕ್ಕೆ ಒಳಗಾಗುತ್ತಾನೆ. ನಾವು ನಮ್ಮ ಆಸೆಗಳನ್ನೂ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಒಳ್ಳೆ ಮಾರ್ಗದಲ್ಲಿ ನಡಿಯಬೇಕು.

bottom of page