ದೇಶ ಸುತ್ತಿ ನೋಡು ಕೋಶ ಓದಿ ನೋಡು
ಮನುಷ್ಯ ತನ್ನ ಅನುಭವಗಳನ್ನು ಹೆಚ್ಚಿಸಿಕೊಳ್ಳ ಬೇಕಾದರೆ ಬೇರೆ ಬೇರೆ ಊರುಗಳಿಗೆ ಹೋಗಿ, ಅಲ್ಲಿನ ಜೀವನ ಶೈಲಿ, ಅವರ ಆಚಾರ ವಿಚಾರಗಳನ್ನು ತಿಳಿದುಕೊಳ್ಳ ಬೇಕು. ಒಂದೇ ಊರಲ್ಲಿ ಕಾಲಕಳೆದರೆ ನಮಗೆ ಯಾವುದೇ ಜೀವಾನುಭವ ಆಗುದಿಲ್ಲ. ನಮಗೆ ಒಳ್ಳೆಯ ನಿರ್ಧಾರಗಳನ್ನು ಮಾಡಿ, ಜೀವನದಲ್ಲಿ ಒಳ್ಳೆಯ ಸ್ವಭಾವವನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.
ಪುಸ್ತಕ (ಕೋಶ) ಗಳನ್ನು ಓದಿದಷ್ಟು ನಮಗೆ ಲೋಕ ಜ್ಞಾನ ಬೆಳೆಯುತ್ತದೆ. ಒಂದು ವಿಷದ ಬಗ್ಗೆ ಗಾಹನವಾಗಿ ತಿಳಿದುಕೊಳ್ಳ ಬೇಕಾದರೆ, ಅದರ ಬಗ್ಗೆ ತುಂಬ ಓದಬೇಕು. ಅದೇ ಬೇರೆ ಬೇರೆ ವಿಷಯ ತಿಳಿದುಕೊಳ್ಳ ಬೇಕಾದರೆ, ಬೇರೆ ಬೇರೆ ವಿಷಯಗಳ ಬಗ್ಗೆ ಓದಬೇಕು. ನಾವು ಎಷ್ಟು ಓದುತ್ತೇವೋ ಅಷ್ಟೇ ಜಾಣರಾಗುತ್ತೇವೆ. ಆದರಿಂದಲೇ ನಮ್ಮ ಶಾಲೆಯಲ್ಲಿ ಶಿಕ್ಷಕರು ನಮಗೆ ಬೇರೆ ಬೇರೆ ವಿಷಯಗಳ ಬಗ್ಗೆ ಓದಬೇಕು ಎಂದು ಸಲಹೆನೀಡುತ್ತಾರೆ.ನಮಗೆ ಊರುಗಳನ್ನು ಭೇಟಿ ಮಾಡುವ ಅವಕಾಶವಿಲ್ಲದಿದ್ದರೆ, ಆ ಊರಿನ ಬಗೆಗಿನ ಕೋಶವನ್ನಾದರೂ ಓದಬೇಕು.
ನಾವು ಈ ಎರಡು ಸಲಹೆಗಳನ್ನು ಕಾರ್ಯಗತಗೊಳಿಸಿದರೆ ನಾವು ಜಾಣರಾಗುವುದರಲ್ಲಿ ಸಂದೇಹವೇ ಇಲ್ಲ.