ಹೆತ್ತವರಿಗೆ ಹೆಗ್ಗಣ ಮುದ್ದು
- kannadambalge
- Mar 21, 2018
- 1 min read
ತಂದೆ ತಾಯಿಗಯರಿಗೆ ತಮ್ಮ ಮಗು ಎಷ್ಟು ಕುರೂಪವಾಗಿದ್ದರೂ ಸುಂದರವಾಗಿ ಕಾಣುತ್ತದೆ. ಆ ಮಗುವಿನ ರೂಪ ಒಂದು ಇಲಿ ಮರಿಯಂತೆ ಇದ್ದರೂ, ಮುಗುವಿನಿಂದ ಮೇಲಿನ ಪ್ರೀತಿ ಬಹಳವಾಗಿರುತದೆ. ಮಗುವು ಚಿಕ್ಕ ಪುಟ್ಟ ಕೆಲಸ ಮಾಡಿದರೆ, ದೊಡ್ಡ ಸಾಧನೆ ಮಾಡಿದಂತೆ ತೋರುತದೆ. ಇದು ಬರೀ ಮನುಷ್ಯರಲ್ಲಿ ಅಲ್ಲ, ಪ್ರಾಣಿಗಳನ್ನು ನಾವು ಈ ವಿಧದ ಸ್ವಭಾವವನ್ನು ಕಾಣಬಹುದು.
ಅಂತೆಯೇ ಆ ಮೂಗು ಎಷ್ಟೇ ದೊಡ್ಡ ತಪ್ಪು ಕೆಲಸ ಮಾಡಿದರೂ ಅದೇ ಕ್ಷುಲ್ಲಕಯೆಂದು ಎನಿಸುತ್ತದೆ. ಇಂತಹ ಪ್ರೀತಿ ಅತಿಯಾಗಿ ಹೋದರೆ ಅದು ಆ ಮುಗುವಿನಿಂದ ಸೋಲಿಗೆ ಕಾರಣವಾಗಬಹುದು. ತಂದೆ ತಾಯಿಯಂದಿರು ಇಂತಹ ಅಂಧ ಪ್ರೀತಿಗೆ ಒಳಗಾಗದೆ ಮಗುವಿನ ಬೆಳವಿನಿಗೆಗೆ ಪ್ರೋತ್ಸಾಹ ನೀಡಬೇಕು. ಈ ಸಂಧರ್ಭದಲ್ಲಿ "ಊರಿಗೆ ದೊರೆ ಆದರೂ ತಾಯಿಗೆ ಮಗನೆ" ಗಾದೆಯನ್ನು ನೆನೆಯಬಹುದಾಗಿದೆ. ಒಂದು ತಾಯಿ, ಅವಳ ಮಗು ದೊಡ್ಡವನಾಗಿ, ದೊಡ್ಡ ಸಾಧನೆ ಮಾಡಿದರೂ, ಅವನು ಇನ್ನು ಚಿಕ್ಕ ವಯಸ್ಸಿನವನು, ಎನ್ನುವ ಭಾವನೆ ಇರುತ್ತದೆ. ಎಷ್ಟು ವರ್ಷಗಳು ಆದರೂ ಇನ್ನು ತನ್ನ ಕೈ ಹಿಡಿದು ನಡೆಯುವ ಮಗು ಎಂದು ಎಣಿಸುತ್ತಾಳೆ.
