ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
ಬೆಕ್ಕೊಂದು ಬೇಟೆಯಾಡಿ ಇಲಿಯನ್ನು ಹಿಡಿದರೆ, ಅದನ್ನ ಹಾಗೆ ಕೊಲ್ಲುವುದಿಲ್ಲ. ಅದರ ಜೊತೆ ಆಟವಾಡಿ, ಅದನ್ನು ಈ ಪಕ್ಕದಿಂದ ಆಪಕ್ಕೆ ಎತ್ತಿ ಎಸಿದು ಆಟವಾಡುತ್ತದೆ. ಇದರಲ್ಲೇ ಸಂತೋಷವನ್ನು ಕಾಣುತ್ತದೆ. ಅದೇ ಇಲಿ ಅರೆ ಜೀವವಾಗಿ, ತುಂಬ ಸಂಕಷ್ಟಪಡುತ್ತದೆ. ನೋವುವನ್ನು ಅನುಭವಿಸುತ್ತದೆ. ಸಾವು-ಜೀವದ ನಾಡುವೆ ಒದ್ದಾಡುತ್ತದೆ.
ನಮ್ಮಲ್ಲಿಯೂ ಅದೇ ಸನ್ನಿಯೇಶಗಳು ತುಂಬ ಸಿಗುತ್ತವೆ. ಒಬ್ಬರಿಗೆ ಅಷ್ಟೇನೂ ದೊಡ್ಡ ವಿಷಯ ಎನಿಸದದ್ದು ಇನ್ನೊಬ್ಬರಿಗೆ ಸಂಕಷ್ಟಕರ ಆಗಬಹುದು. ಹಣದ ವಿಷ್ಯದಲ್ಲಾಗಲೀ, ಕೆಲಸದ ವಿಷಯದಲ್ಲಾಗಲೀ ನಮಗೆ ಇಂಥ ಪರಿಸ್ಥಿತಿ ತುಂಬ ಇರುತದೆ. ಇದನ್ನು ಅರಿತು ನಾವು ಸೌಹಾರ್ದತೆ ಇಂದ, ಬೇರೆಯವರ ಕಷ್ಟ ಸುಖವನ್ನು ತಿಳಿದು ನಡೆಯಬೇಕು.
ನಮ್ಮಲ್ಲಿ ಇಂಥ ಭಾವನೆಗಳು ಈಗ ಕಡಿಮೆ ಆಗುತ್ತಿರುವುದರಿಂತದಲೇ ಈ ಜಗತ್ತಿನಲ್ಲಿ ಇಷ್ಟು ಅಶಾಂತಿ ತುಂಬಿದೆ. ಈ ಗಾದೆಯಂತೆ ಬೇರೆಯವರಿಗೂ ಅವರವರದೇ ಆದ ಇಷ್ಟ ನಷ್ಟಗಳು ಇರುತ್ತವೆ ಎಂದು ತಿಳಿದುಕೊಂಡು ಎಲ್ಲರೂ ಸಹಬಾಳ್ವೆ ನಡಿಸಿದರೆ, ಈ ಭೂಮ್ಬಿ ಎಷ್ಟು ಸುಖದಾಯಕ ವಾದೀತು?