ತುಂಬಿದ ಕೊಡ ತುಳುಕುವುದಿಲ್ಲ!
- kannadambalge
- Mar 23, 2018
- 1 min read

ಕೊಡವನ್ನು ಸಂಪೂರ್ಣವಾಗಿ ತುಂಬಿದರೆ, ಅದನ್ನು ಬೇರೆ ಜಾಗಕ್ಕೆ ಕೊಂಡೊಯ್ಯುವಾಗ ಅದರಿಂದ ನೀರು ತುಳುಕುವುದಿಲ್ಲ. ಆದರೆ ಕೊಡವನ್ನು ಅರ್ಧ ಭಾಗ ತುಂಬಿಸಿದರೆ, ಅದರ ನೀರು ತುಳುಕಿ, ನೀರು ಚೆಲ್ಲಿಹೋಗುತ್ತದೆ. ಕೊಡವನ್ನು ಮನುಷ್ಯನಿಗೆ ಹೋಲಿಸಿ,ಕೊಡದಲ್ಲಿರುವ ನೀರನ್ನು ಅವನಲ್ಲಿ ಇರುವು ವಿದ್ವತ್, ಜ್ಞಾನಕ್ಕೆ ಹೋಲಿಸಬಹುದು. ಎಷ್ಟು ವಿದ್ವತ್ ತುಂಬಿರುತ್ತದೆಯೋ ಅಷ್ಟು ಕಡಿಮೆ ಮಾತು ವಾನಳ್ಳಿ ಇರುತ್ತದೆ. ತನ್ನ ಜಾಣ್ಮೆಯ ಬಗ್ಗೆ ಅಥವಾ ತನಗೆ ತಿಳಿದುರಿವ ಬಗ್ಗೆ ತುಂಬ ಕಡಿಮೆ ಹೇಳುತ್ತಾನೆ. ತುಂಬ ಬಲ್ಲವರು ಅನೇಕ ಬಾರಿ ಮೂರ್ಖರಂತೆ ಕಾಣುತ್ತಾರೆ. ಅಲ್ಪ ಜ್ಞಾನ ಇರುವವರು ತಮಗೆ ತಿಳಿದಿರುವುದರ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಸ್ವಲ್ಪ ತಿಳಿದರೂ ತನಗೆಲ್ಲ ತಿಳಿದಿದೆ ಎಂತು ತೋರ್ಪಾಡಿಸುತ್ತಾರೆ. ಬಸವಣ್ಣನವರು ಹೇಳಿದಂತೆ "ಏಳು ಬೆಟ್ಟ ಹಾರುವೆನೆಂದರೆ ಅಹುದಹುದೆನ್ನುವುದೇ ಲೇಸು". ಇಂತಹ ಭಾಡಾಯೀ ಕೊಚ್ಚಿಕೊಳ್ಳುವವರನ್ನು ತಿದ್ದುವ ಕೆಲಸಕ್ಕಿಂತ ಸುಮ್ಮನಿರುವುದೇ ಒಳ್ಳೆಯದು.