ಹಾಸಿಗೆ ಇದ್ದಷ್ಟು ಕಾಲು ಚಾಚು.
ನಾವು ಮಲಗುವ ಹಾಸಿಗೆ ಎಷ್ಟು ಉದ್ದ ಇರುತ್ತದೆಯೋ ಅಷ್ಟೇ ಉದ್ದ ನಮ್ಮ ಕಾಲನ್ನು ಚಾಚಬೇಕು. ಅದಕ್ಕಿಂತ ಉದ್ದ ಚಾಚಿದರೆ ನಮ್ಮ ಕಾಲು ನೆಲಕ್ಕೆ ತಾಗಿ, ನಮಗೆ ಅಸಮಾಧಾನ ಆಗಬಹುದು. ಅದರಿಂದ ನಮಗೆ ಆಗುವ ತೊಂದರೆ ನಮಗೆ ಮಲಗಲು ಬಿಡುವುದಿಲ್ಲ..
ನಾವು ಎಷ್ಟು ಶಕ್ತರೋ ಅಷ್ಟೇ ಪ್ರಮಾಣದ ಕೆಲಸವನ್ನು ಮಾಡಬೇಕು. ನಮ್ಮ ಮಿತಿ ಮೀರಿದ ವಸ್ತುವಿನ ಜವಾಬ್ದಾರಿ ವಹಿಸಿಕೊಂಡರೆ ನಮಗೆ ಅದನ್ನು ನಿಭಾಯಿಸಲು ಸಾಧ್ಯವಿಲ್ಲ. ಒಂದು ರಾಜನಿಗೆ ಮಾತ್ರ ಆನೆಯನ್ನು ಸಾಕಲು ಸಾಧ್ಯ, ಅದೇ ಒಬ್ಬ ಸಾಮಾನ್ಯ ಮನುಷ್ಯ ಆನೆಯನ್ನು ಸಾಕಿದರೆ ಅವನಿಗೆ ತುಂಬ ಕಷ್ಟಗಳು ಬರುತ್ತವೆ. ಕೊನೆಗೆ ಅವನು ಅದನ್ನು ಕೈ ಬಿಡಬೇಕಾಗಿ ಬರುತದೆ.
ನಾವು ಈ ಗಾದೆಯನ್ನು ಹಣದ ಬಳಕೆಗೆ ಬಗ್ಗೆ ಉಪಯೋಗಿ ಸುತ್ತೇವೆ. ನಮಲ್ಲಿ ಎಷ್ಟು ದುಡ್ಡಿನ ಬಲವಿದೆಯೋ, ಅಷ್ಟೇ ಖರ್ಚು ಮಾಡಬೇಕು. ತುಂಬ ಸಾಲ ಮಾಡಿ ಐಷಾರಾಮ ಮಾಡಿದರೆ, ಅದರಿಂದ ಬರುವುದು ಕಷ್ಟವಾಗುತ್ತದೆ. ನಮ್ಮಇತಿಮಿತಿಯಲ್ಲಿ ಖರ್ಚು ಮಾಡಿದರೆ ನಮ್ಮ ಜೀವನ ಸಂತೋಷದಾಯಕ ಆಗಬಹುದು.