ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ
ಪ್ರತಿ ಒಂದು ಹನಿ ಒಟ್ಟುಕೂಡಿ ಒಂದು ಸರೋವರ ಅಥವಾ ಹಳ್ಳ ನಿರ್ಮಾಣವಾಗುತ್ತದೆ. ಪ್ರತಿಯೊಂದು ಹನಿಯೂ ಈ ಹಳ್ಳದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹನಿಗಳನ್ನು ನಾವು ಕಡೆಗಣಿಸಿದರೆ ಆ ಗಾತ್ರದ ಹಳ್ಳ ತಯಾರಾಗದು. ಹಾಗೆಯೇ ಪ್ರತಿಯೊಂದು ತೆನೆ, ಪ್ರತಿಯೊಂದು ಫಲ ಸೇರಿದರೆ ದೊಡ್ಡ ಬಳ್ಳವಾಗುತ್ತದೆ. ಸಣ್ಣ ಭಾಗಯೂ ದೊಡ್ಡ ಬೆಳೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಣ್ಣ ಭಾಗವೆಂದು ನಾವು ನಿರ್ಲಕ್ಷಿಸಿದರೆ ಬೆಳೆಯ ಪ್ರಮಾಣ ಕಡಿಮೆ ಆಗುವುದು.
ಒಂದು ಸಾಧನೆ ಮಾಡುವುದರಲ್ಲಿ ಪ್ರತಿಯೊಂದು ಕೆಲಸದ ಮೌಲ್ಯ ತುಂಬಾಇರುತ್ತದೆ. ಅದರಂತೆ ಒಂದು ಗುಂಪಾಗಿ ಮಾಡುವ ಕೆಲಸದಲ್ಲಿ ಪ್ರತಿಯೊಬ್ಬನ ಪಾತ್ರವನ್ನು ಕಡೆಗಣಿಸುವಂತಿಲ್ಲ. ಇದು ಸಣ್ಣ ಕೆಲಸ ಇದರಿಂದ ಯಾವ ಉಪಯೋದವೂ ಇಲ್ಲ ಎಂದು ಭಾವಿಸಿ ನಿರ್ಲಕ್ಷಿಸಿದರೆ, ನಮ್ಮ ಗುರಿ ಮುಟ್ಟುವುದರಲ್ಲಿ ತೊಂದರೆಗಳಾಗಬಹುದು. ಆದರಿಂದ ಗುಂಪಿನಲ್ಲಿ ಪ್ರತಿಯೊಬ್ಬರ ಪಾಲನ್ನು ಸರಿಯಾಗಿ ಗುರುತಿಸಿ, ಗೌರವಿಸ ಬೇಕಾಗುತ್ತದೆ. ಹಾಗೆ ನಮ್ಮ ಸ್ವಂತ ಸಾಧನೆಯ ದಾರಿಯಲ್ಲಿ ಯಾವ ಕೆಲಸವನ್ನು ಕೇವಲಯೆಂದು ಭಾವಿಸದೆ, ಸಣ್ಣದಾದರೂ ನಿಷ್ಠೆಯಿಂದ ಮಾಡಬೇಕು. ಸಣ್ಣ ಸಣ್ಣ ಕೆಲಸಗಳಿಂದ ಪ್ರಾರಂಭಿಸಿ, ದೊಡ್ಡ, ದೊಡ್ಡ ಸಾಧನೆಗಳು ನಡದಿವೆ. ಪ್ರತಿ ಹನಿಗೂ, ಪ್ರತಿ ತೆನೆಗೂ ಅದರ ಪಾಲಿನ ಗೌರವ ನೀಡಿದರೆ ನಮ್ಮ ಯಶಸ್ಸು ನಿಶ್ಚಿತ.