ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ!
- kannadambalge
- May 19, 2018
- 1 min read
ನಮ್ಮ ದೇವಸ್ಥಾನಗಳಲ್ಲಿ ದೇವರನ್ನು ಮುಟ್ಟಲು ಪೂಜಾರಿಗಳಿರುತ್ತಾರೆ. ನಮ್ಮ ಪೂಜೆ, ಅರ್ಚನೆ, ಸೇವೆಯನ್ನು ಪೂಜಾರಿಯು ದೇವರಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗೆ ದೇವರು ಅಸ್ತು ನೀಡಿದರೆ ಅದು ಪೂಜಾರಿಯ ಮುಖಾಂತರ ನಮಗೆ ತಲುಪುತ್ತದೆ ಎನ್ನುವ ನಂಬಿಕೆಯೂ ಇದೆ. ಇದು ಪ್ರಸಾದ, ತೀರ್ಥ್ದದ ರೂಪದಲ್ಲಿ ಇರಬಹುದೇನೋ. ಆ ಗಾದೆಯ ಪ್ರಕಾರ ದೇವರು ವರವನ್ನು ಭಕ್ತನಿಗೆ ಕೊಟ್ಟರೂ, ನಡುವೆ ಬರುವ ಪೂಜಾರಿ ಆ ವರವನ್ನು ಭಕ್ತನಿಗೆ ತಲುಪದಂತೆ ಮಾಡಿರುವ ಸಂಧರ್ಭವನ್ನು ಹೇಳುತ್ತದೆ. ನಮ್ಮ ಈಗಿನ ಸರ್ಕಾರೀ ಕಚೇರಿಯ ವ್ಯವಸ್ಥೆಗೆ ಈ ಗಾದೆ ಮಾತು ಸೂಕ್ತವೆನಿಸುತ...್ತದೆ. ಸರ್ಕಾರದಿಂದ ಮಂಜೂರಾಗಿ ಬಂದ ಹಣವನ್ನು ಸರಿಯಾಗಿ ಹಂಚದೆ, ಕಚೇರಿಯಲ್ಲಿರುವ ಅಧಿಕಾರಿಗಳು ಅದನ್ನು ತಮ್ಮದಾಗಿಡಿಕೊಳ್ಳುವುದು ಸಾಮಾನ್ಯದ ವಿಷಯ. ಸೂಕ್ತರಿಗೆ ಅದು ದೊರಕದೆ ಪೂಜಾರಿಗಳಂತೆ ನಡುವೆ ಇರುವ ಅಧಿಕಾರಿಗಳು, ಸ್ವಾರ್ಥ್ಯದಿಂದ ವ್ಯವಹರಿಸುತ್ತಾರೆ. 'ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲ' ಎಂಬ ಗಾದೆಯು ಇಂಥ ಸಂಧರ್ಭಕ್ಕೆ ಸೂಕ್ತವಾಗಿದೆ.