ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ
ಹುಚ್ಚನಿಗೆ ಮದುವೆ ಆಗುತ್ತಿರುವ ಸಮಾರಂಭದಲ್ಲಿ ಅದನ್ನು ತಡೆಯದೆ, ಅಲ್ಲಿ ಊಟ ಮಾಡಿ ಆಗುವ ಲಾಭವನ್ನು ಪಡೆದುಕೊಳ್ಳುವವನೇ ಜಾಣ. ಹುಚ್ಚನ ಮದುವೆಯಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಯಾವ ಲಾಭವೂ ಇರುವುದಿಲ್ಲ. ಅಂತಹ ಸಮಾರಂಭದಲ್ಲಿ ಊಟ ಒಂದೇ ಲಾಭದ ವಿಷಯ. ಆದರಿಂದ ಸಮಾರಂಭದಲ್ಲಿ ಊಟ ಮಾಡಿದವನೇ ಜಾಣ. ಉಪಯೋಗವೇ ಇರದ ಸನ್ನಿವೇಶದಲ್ಲಿ ಲಾಭಕಂಡುಕೊಳ್ಳುವವನೇ ಜಾಣ ಎನ್ನುವುದು ಈ ಗಾದೆಯ ಮರ್ಮ. ಯಾವುದೇ ಸಂಧರ್ಭದಲ್ಲಿ ಯಾರು ಉಪಯೋಗ ಪಡೆದುಕೊಳ್ಳುತ್ತಾರೋ ಅವರೇ ಮುಂದೆ ಯಶಸ್ಸನ್ನು ಕಾಣುತ್ತಾರೆ. ಎಷ್ಟೇ ಉಪಯೋಗಕ್ಕೆ ಬಾರದು, ಲಾಭವೇ ಇಲ್ಲ ಎಂದು ಭಾವಿಸಿ ತ್ಯಜಿಸಿದರೆ ಅದರಲ್ಲಿ ಜಾಣತನ ಇಲ್ಲ. ಸನ್ನಿವೇಶಯನ್ನು ಸರಿಯಾರಿ ಅರ್ಥಯಿಸಿಕೊಂಡು ಅದರಲ್ಲಿ ನಮ್ಮ ಲಾಭವನ್ನು ಕಾಣುವುದೇ ಜಾಣತನ.