top of page

Our Recent Posts

Archive

Tags

ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಬಂಗಾರವಲ್ಲ

ತಾವು ನೋಡಿದೆಲ್ಲವನ್ನು, ಕೇಳಿದೆಲ್ಲವನ್ನು ನಂಬುವವರ ಸಂಧರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. 'ಪ್ರತ್ಯಕ್ಷ ಕಂಡರೂ ಪರಾಂಭರಿಸಿ ನೋಡು' ಎನ್ನುವ ಗಾದೆ ಇಲ್ಲಿ ನೆನಪಿಗೆ ಬರುತ್ತದೆ. ಮುಗ್ದ ಮನಸಿನವರು ಮೋಸ ಹೋಗುವುದು ಸಾಮಾನ್ಯ. ಒಂದು ವಸ್ತು ಬಿಳಿಯ ಬಣ್ಣದ್ದಾಗಿದೆ ಎಂದಾಕ್ಷಣ ಅದು ಹಾಲು ಎನ್ನಲಾಗದು. ಅಂತೆಯೇ ವಸ್ತುವು ಹೊಳೆಯುತ್ತಿರುವುದರಿಂದ ಅದನ್ನು ಬಂಗಾರದಿಂದ ಮಾಡಲಾಗಿದೆ ಎಂದು ಎಣಿಸಲಾಗದು. ವಸ್ತುವನ್ನು ಪರೀಕ್ಷಿಸಿ ನಿರ್ಧರಿಸಬೇಕಾದುದು ನಮ್ಮ ಕರ್ತವ್ಯ . ಬಿಳಿಯ ನೀರು ಸುಣ್ಣವಾಗಿರಬಹುದು, ಹೊಳೆಯುವುದು ಕಾಗೆ ಬಂಗಾರವಿರಬಹುದು.ನಾವು ಮುನ್ನಡೆಯುವ ಮುನ್ನ ಸರಿಯಾಗಿ ಪರೀಕ್ಷಿಸಿ, ಪ್ಪರಂಬರಿಸಿ ನೋಡಿಯೇ ನಡೆಯಬೇಕು. ಇದರಿಂದ ಮುಂದೆ ನಮಗೆ ಭ್ರಮನಿರಸನ, ನಿರಾಸೆ ಆಗುವುದನ್ನು ತಡೆಯಬಹುದು. ನಾವು ಮೋಸ ಹೋಗುವುದನ್ನು ತಡೆಯಲು ಯಾವುದೇ ನಿರ್ಧಾರವನ್ನು ತಕ್ಷಣ ನಮ್ಮ ಕಲ್ಪನೆಯಿಂದ ತೆಗೆದುಕೊಳ್ಳದೆ, ಅದರ ವಿಚಾರವಾಗಿ ಯೋಚಿಸಿ, ಸಮಾಲೋಚಿಸಿ, ಪರೀಕ್ಷಿಸಿ ನೋಡುವುದು ಜಾಣತನ

bottom of page