ಮಾಡಿದುಣ್ಣೋ ಮಾರಾಯ!
ವಾಟ್ ಗೋಸ ಅರೌಂಡ್, ಕಾಮ್ಸ್ಅರೌಂಡ್! ನಾವು ಮಡಿದ ಕೆಲಸದ ಫಲ ನಮಗೆ ತಿರುಗಿ ಬರುತ್ತದೆ ಎನ್ನುವುದು ಈ ಗಾದೆಯ ಗುಟ್ಟು. ನಾವು ಮಾಡಿದ ಒಳ್ಳೆಯ ಕೆಲಸದ ಫಲದಿಂದಾಗಿ ನಮಗೆ ಒಳಿತಾಗುತ್ತದೆ. ನಾವು ಮಾಡಿದ ಕೆಟ್ಟ ಕೆಲಸದಿಂದಾಗಿ ನಮಗೆ ಕೆಟ್ಟದಾಗುತ್ತದೆ. ಒಳ್ಳೆಯತನಕ್ಕೆ ಒಳ್ಳೆಯದು. ಕೆಟ್ಟತನಕ್ಕೆ ಕೆಟ್ಟದು ಎನ್ನುವುದು ಈ ಗಾದೆಯ ಅರ್ಥ. ನಾವು ಮಾಡಿದ ಕೆಲಸದ ಫಲವನ್ನು ನಾವು ಅನುಭವಿಸುತ್ತೇವೆ. ಮಾಡಿದನ್ನು ನಾವೇ ಉಣ್ಣಬೇಕು (ಅನುಭವಿಸಬೇಕು). ನಾವೇ ನಮ್ಮ ಭವಿಷ್ಯದ ಕರ್ತ್ರ್ಗಳು ಎನ್ನಬಹುದು. ನಾವು ಈಗ ಅನುಭವಿಸುತ್ತಿರುವುದು ನಾವು ಹಿಂದೆ ಮಾಡಿದ ಕೆಲಸದ ಫಲ. ಧರ್ಮೋ ರಕ್ಷತಿ ರಕ್ಷಿತಃ' ಎಂದಂತೆ. ಧರ್ಮವನ್ನು ಕಾಪಾಡಿದವರನ್ನು ಧರ್ಮವೇ ರಕ್ಷಿಸುತ್ತದೆ. ಹಾಗೆ ನಾವು ಮಾಡಿದ ಕೆಲಸವೂ ನಮನ್ನು ಬಿಡದೆ ಕಾಡುತ್ತದೆ. ಆದ್ದರಿಂದನಾವು ಒಳಿತನ್ನು ಕೇಳಬೇಕು, ಒಳಿತನ್ನು ನೋಡಬೇಕು, ಒಳಿತನ್ನೇ ಮಾಡಬೇಕು.