top of page

Our Recent Posts

Archive

Tags

Search

ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ

  • kannadambalge
  • Jun 29, 2018
  • 1 min read

ಊಟಕ್ಕೆ ವ್ಯವಸ್ಥೆ ಇಲ್ಲದಂತಹ ಬಡತನವಿದ್ದು, ಬರೀ ತೋರುವಿಕೆಗೆ ಆಡಂಬರ ಮಾಡುವ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. ಮೂರು ಹೊತ್ತು ಚೆನ್ನಾಗಿ ತಿಂದು, ಉಂಡು ಇರಬೇಕಾದ ಸಂಪತ್ತು ಇಲ್ಲವಾದರೂ, ಬೇರೆಯವರು ತನ್ನ ಬಗ್ಗೆ ಕೀಳಾಗಿ ಕಾಣಬಾರದೆಂದು ತನ್ನ ಜುಟ್ಟಿಗೆ ಮಲ್ಲಿಗೆ ಹೂವನ್ನು ಖರೀದಿಸಿಕೊಳ್ಳುವುದು ಮೂರ್ಖತನ. ತನ್ನ ಅಗತ್ಯತೆಗಳನ್ನು ಮೊದಲು ಪೂರೈಸಿಕೊಂಡು, ಆಮೇಲೆ ತನ್ನ ಬಗ್ಗೆ ಬೇರೆಯವರು ಏನು ಯೋಚಿಸುತಾರೋ ಎನ್ನುವುದರ ಬಗ್ಗೆ ಚಿಂತಿಸುವುದು ಒಳಿತು. ಬರೀಯ ಆಡಂಬರಕ್ಕಾಗಿ ತನ್ನೆಲ್ಲ ಸಮಯ, ಸಂಪತ್ತನ್ನು ವ್ಯಯಿಸುವವರನ್ನು ಉದ್ದೇಶಿಸಿ ಆ ಗಾದೆಯನ್ನು ಬಳಸುತ್ತಾರೆ. ಯೋಚಿಸಬೇಕಾದ ವಿಷಯಯೆಂದರೆ, ಬೇರೆಯವರ ಬಗ್ಗೆ ಯೋಚಿಸುತ್ತಾ , ಸಮಾಜದ ಬಗ್ಗೆ ಚಿಂತಿಸುತ್ತಾ, ಎಲ್ಲ ಕೆಲಸ, ಕಾರ್ಯದಲ್ಲೂ ಅದಕ್ಕೆ ಪ್ರಾಮುಖ್ಯತೆ ಕೊಡುತಾ ಹೋದಲ್ಲಿ, ನಮ್ಮ ಬದುಕೊಂದು ನಾಟಕವಾಗಿ ಉಳಿಯುತ್ತದೆ. ನಮ್ಮ ಆಸೆ, ಅಗತ್ಯತೆಯನ್ನು ಮೊದಲು ಪೂರೈಸಿಕೊಂಡು ಆಮೇಲೆ ಸಮಾಜದ ಬಗ್ಗೆ ಚಿಂತಿಸುವುದು ಜಾಣತನ. ಸುಳ್ಳಿನ ಕಂತೆ, ಆಡಂಬರವು ಒಂದಲ್ಲ ಒಂದು ದಿನ ಹೊರಗೆ ಬರಲೇ ಬೇಕಾಗುತ್ತದೆ. ಅದನ್ನು ಹೆಚ್ಚು ದಿನ ಮುಂದುವರಿಲು ಸಾಧ್ಯವಿಲ್ಲ. ಸುಳ್ಳಿನ ಕಂತೆ ಬಯಲಾದಂತೆ ಸೋಲುವುದು ಖಂಡಿತಾ.

Follow us 

  • Facebook

Contact

Address

Bengaluru, Karnataka, India

©2020 by kannadambalge. Proudly created with Wix.com

bottom of page