ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ
ಚಿಂತೆಯು ಎಲ್ಲ ರೋಗಗಳಿಗೆ ಮೂಲ. ಚಿಂತೆಯಿಲ್ಲದಿದ್ದರೆ ಸುಖಯಾದ ಜೀವನ ನಡೆಸಬಹುದು. ಚಿಂತೆಯಿಲ್ಲಿದ್ದರೆ, ಎಂಥ ವಾತಾವರಣ ಇದ್ದರೂ ನೆಮ್ಮದಿಯಲ್ಲಿರಬಹುದು. ಇದು ಆ ಗಾದೆಯ ಸಾರವಾಗಿದೆ. ಸಂತೆಯೆಂದರೆ ಎಂಥ ಸದ್ದು, ಗದ್ದಲ, ಜನ ಸಂದಣಿ ಇರುವುದು ಎಂದು ನೀವೇ ಕಲ್ಪಿಸಿಕೊಳ್ಳಿ. ಅಂಥ ವಾತಾವರಣದಲೂ ನೆಮ್ಮದಿಯಿಂದ ಮಲಗಿ ನಿದ್ರಿಸಬಹುದಾದ ಮನಸ್ಥಿತಿ ಚಿಂತೆ ಇಲ್ಲದವನಿಗೆ ಇರುತ್ತದೆ. ಅದೇ ಚಿಂತೆಗೆ ಒಳಗಾದವನು ಎಂಥ ಸುಖದ ಸುಪ್ಪತ್ತಿಗೆಯಲಿದ್ದರು, ನೆಮ್ಮದಿಯಿಂದ ನಿದ್ರೆ ಬರಿಸಿಕೊಳ್ಳಲಾರ. ಎಂಥ ಸುಖದ ಮಂಚ, ಹಾಸಿಗೆ ಇದ್ದರೂ ಕಣ್ಣಿಗೆ ಸುಖದ ನಿದ್ರಾದೇವಿ ಒಲಿಯುವುದಿಲ್ಲ. ಬರಿಯ ಚಿಂತೆಯಿಂದ ಏನು ಉಪಯೋಗವಿಲ್ಲ. ಚಿಂತೆಯ ಜೊತೆ ಕಾರ್ಯಪ್ರವ್ರತ್ತಿಯನ್ನು ಬೆಳೆಸಿಕೊಂಡರೆ ನಮ್ಮ ಜೀವನ ಸುಖಕರವಾಗಬಹುದು.