top of page

Our Recent Posts

Archive

Tags

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ


ಅತ್ತೆ ಸೊಸೆಯಂದಿರ ನಡುವಿನ ಘರ್ಷಣೆಯ ಬಗ್ಗೆ ನಮಗೆಲ್ಲ ತಿಳಿದಿದೆ. ಒಂದು ಸಲ ಅತ್ತೆ, ಸೊಸೆಯ ಮೇಲೆ ಹಗೆ ಸಾಧಿಸಿದರೆ, ಇನ್ನೊಂದು ಸಲ ಸೊಸೆ ಅತ್ತೆಯ ಮೇಲೆ ಸಾಧಿಸುತ್ತಲೇ. ಇವರಿಬ್ಬರೂ ತಮಗೆ ಬೇಕಾದ ಕಾಲಕ್ಕೆ ಕಾಯುತ್ತಿರುತ್ತಾರೆ. ಇದೂ ಬಂದೆ ಬರುತ್ತದೆ. ಹೇಗೆ ಅತ್ತೆ ಹೇಗೆ ಮೊದಮೊದಲು ಸೊಸೆಯ ಮೇಲೆ ತನ್ನ ಮೇಲಗೈಯನ್ನು ಸಾಧಿಸುತ್ತಾರೋ, ಸೊಸೆಯು ಅತ್ತೆಯ ವ್ರ್ ಧಾಪ್ಯದಲ್ಲಿ ತನ್ನ ಮೇಲರಿಮೆಯನ್ನು ತೋರಿಸುತ್ತಾಳೆ.

ಇದನ್ನು ಬರೀ ಅತ್ತೆ ಸೊಸೆ ಸಂಬಂಧದಲ್ಲಿ ಮಾತ್ರವಲ್ಲ, ಎಲ್ಲ ವಾತಾವರಣದಲ್ಲಿ ನಾವು ಕಾಣಬಹುದು. Every dog has its day ಎನ್ನುವಂತೆ, ಎಲ್ಲರಿಗೂ ಅವರ ಪಾಲಿನ ಅವಕಾಶ ದೊರಕುತ್ತದೆ. ತನಗೆ ಈಗ ಯಾಕೆ ಸಿಗಲಿಲ್ಲ ಎಂದು ಕೊರಗುತ್ತಾ ಕೂತಲ್ಲಿ ಏನು ಉಪಯೋಗವಿಲ್ಲ. ತಮ್ಮ ಕಾಲ ಯಾವಾಗ ಬರುವುದೋ ಎಂದು ಕಾದು, ಸಿಗುವ ಎಲ್ಲ ಅಕಾಶವನ್ನು ಉಪಯೋಗಿಸಬೇಕು. ತಮಗೂ ಒಂದು ಕಾಲ ಬಂದೆ ಬರುತ್ತದೆ, ತಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸದ ಪರಿಣಾಮವು ನಮಗೂ ಒಂದು ದಿನ ಬರುತ್ತದೆ ಎಂಬ ಎಚ್ಚರಿಕೆ ನಮ್ಮ ನಡವಳಿಕೆಯಲ್ಲಿ ಇರಬೇಕು. ಯಾವುದೇ ಕಳ್ಳ (ಕೆಟ್ಟದಿರಲಿ, ಒಳ್ಳೆಯದಿರಲಿ) ಶಾಶ್ವತ ಎಂದು ನಂಬಿ ನಡೆದರೆ ಯಾವಾಗ ಕಾಲ ಬದಲಾಗಿ ನಮ್ಮ ಪರಿಸ್ಥಿತಿ ಬದಲಾಗುವುದೋ ಎಂದು ತಿಳಿಯದು.

bottom of page