top of page

Our Recent Posts

Archive

Tags

ತಾಳಿದವನು ಬಾಳಿಯಾನು


ತಾಳ್ಮೆಗಿಂತ ಮುಖ್ಯವಾದ ಗುಣ ಬೆರಾವುದೂ ಇಲ್ಲ. ತಾಳ್ಮೆ ಇದ್ದರೆ ನಾವೆೇನ ದರೂ ಸಾಧಿಸಬಹುದು.

ಬಾಳೊಂದು ದೋಣಿ. ತಾಳ್ಮೆಯೇ ಅದನ್ನು ಸರಿಯಾದ ಪಥದಲ್ಲಿ ಕರೆದುಕೊಂಡು ಹೋಗುವ ಶಕ್ತಿ.

ತಾಳ್ಮೆ ನಮ್ಮ ಶಕ್ತಿಯಾಗಿದ್ದರೆ ನಾವು ಯಾವ ಯುಧ್ಧವನ್ನು ಗೆಲ್ಲಬಹುದು. ನಾವು ಗೆಲುವನ್ನು ಸಾಧಿಸಬೆಕಾದಾರೆ ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ.

ನಾವು ಮಾಡಿದ ಕೆಲಸದ ಪ್ರತಿ ಫಲ ನಮಗೆ ತಕ್ಷಣ ದೊರಕದು. ಫಲವಿಲ್ಲವೆಂದು ಪ್ರಯತ್ನವನ್ನೆ ಬಿಟ್ಟರೆ? ಫಲ ಕೈಗೂಡುವವರೆಗೆ ಸಹನೆಯಿಂದ ಕಾಯುವುದೇ ಪ್ರಮುಖವಾದುದು.

ತಾಳ್ಮೆ ತಪ್ಪಿ ಕೆಟ್ಟಮಾತುಗಳನ್ನು ಆಡಿದರೆ ಅದರಿಂದ ಕೆಟ್ಟದ್ದೇ ನಡೆಯುತ್ತದೆ. ಈ ಕಾಲದಲ್ಲಿ ತಾಳ್ಮೆ ಎನ್ನುವುದು ವಿರಳ.

ಒಬ್ಬ ರೈತ ಬೀಜ ಬಿತ್ತಿ, ನೀರು ಕೊಟ್ಟು, ಗಿಡದಲ್ಲಿ ಹಣ್ಣುಗಳು ಬೆಳೆದ ಮೇಲೂ ಆ ಹಣ್ಣು ಮಾಗುವವರೆಗೆ ತಾಳ್ಮೆಯಿಂದ, ಸಹನೆಯಿಂದ ಕಾಯಬೆಕಾಗುತ್ತದೆ.

ಅಷ್ಟು ಸಮಯ ಕಾಯಲಾಗದೆಂದು ಚಿಗುರು ಹಣ್ಣನ್ನು ಕಿತ್ತರೆ, ಅದು ಸಿಹಿಯು ಇರದರೆ, ರುಚಿಯು ಇರದು.

ಅದ್ದರಿಂದಲೇ 'ತಾಳ್ಮೆಯಿದ್ದವನು ಒಳ್ಳೆಯ ಬಾಳನ್ನು ಬಾಳುತ್ತನೆ' ಎಂದು ಈ ಗಾದೆ ಘೊಷಿಸುತ್ತದೆ.

Patience is a virtue ಅನ್ನುವಂತೆ, ನೀವು ನಿಮ್ಮ ದಿನ ನಿತ್ಯದ ಕಾರ್ಯದಲ್ಲಿ ತಾಳ್ಮೆಯನ್ನು ಬೇಳೆಸಿಕೊಳ್ಳುತ್ತೀರಲ್ಲ?

bottom of page