top of page

Our Recent Posts

Archive

Tags

ಗುಣ ನೋಡಿ ಗೆಳೆತನ ಮಾಡು


ಕಷ್ಟಕಾಲದಲ್ಲಿ ನಮ್ಮ ಸಂಭಂದಿಕರು ಮುಖ ತಿರುಗಿಸಿದರೂ, ನಮ್ಮ ಸಹಾಯಕ್ಕೆ ಬರುವವರು ನಮ್ಮ ಗೆಳೆಯರು. ಒಬ್ಬ ಒಳ್ಳೆಯ ಗೆಳೆಯನಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಗೆಳೆಯ ನಮ್ಮ ಗುರುವಾಗಿ, ಸಹಭಾಗಿಯಾಗಿ, ತಂದೆಯಾಗಿ, ತಾಯಿಯಾಗಿ, ನಮ್ಮ ಒಳ್ಳೆಯ-ಕೆಟ್ಥದ್ದರಲ್ಲಿ ಪಾಲುದಾರನಾಗಿ, ಮಾರ್ಗದರ್ಶಕನಾಗಿ ನಮ್ಮ ಬೆನ್ನೆಲುಬಾಗಿ ನಿಂತಿರುತ್ತಾನೆ. ಆದ್ದರಿಂದ ಒಂದು ಒಳ್ಳೆಯ ಗೆಳೆಯ ನಮಗೆ ತುಂಬಾ ಅಗತ್ಯ.

ಹಾಗಾದರೆ ಗೆಳೆಯರನ್ನು ಹೇಗೆ ಅಯ್ಕೆಮಾಡಿಕೊಳ್ಳೋಣ? ಅವನ ಬಳಿ ಹಣ ಇದೆಯೆಂದೆ? ಅವನ ಬಳಿ ಶಕ್ತಿ ಇದೆಯೆಂದೆ? ಅವನಿಗೆ ತುಂಬಾ ಜನ ಬೆಂಬಲಿಗರು ಇದ್ದಾರೆಂದೆ? ಅಥವಾ ಅವನ ತುಂಬಾ ಸುಂದರವಾಗಿದ್ದಾನೆಂದೆ?

ಈ ಗಾದೆಯು ಇಂಥಾ ಆಯ್ಕೆಯಲ್ಲಿ ನಮಗೆ ಮಾರ್ಗದರ್ಶಿಯಾಗಿರುತ್ತದೆ. ಗುಣವಂತನಾದವನೇ ಒಳ್ಳೆಯ ಗೆಳೆಯನಾಗಾಬಲ್ಲ ಎಂಬ ಗುಟ್ಟನ್ನು ಈ ಗಾದೆ ಹೇಳುತ್ತದೆ. ಎಷ್ಟೇ ಸುಂದರನಾಗಿರಲಿ, ಶಕ್ತಿಶಾಲಿಯಾಗಿರಿ, ಸಿರಿವಂತನಾಗಿರಲಿ, ಅವನು ಗುಣವಂತನಾಗಿರದಲ್ಲಿ ಅವನು ಒಳ್ಳೆಯ ಗೆಳೆಯನಾಗಲು ಸಾಧ್ಯವಿಲ್ಲ. ಕರುಣೆ, ವಿಶಾಲ ಹೃದಯ, ಸಹಾಯ ಮನೋಭಾವ, ಮುಂತಾದ ಗುಣಗಳೇ ಒಳ್ಳೆಯ ಗೆಳೆಯನ ಲಕ್ಷಣ. ಬಡವನಾದರೂ, ಸಹಾಯ ಮಾಡುವ ಮನಸ್ಸಿದ್ದರೆ ತನ್ನ ಕೈಲಾದಷ್ಟನ್ನು ಮಾಡಿ, ನಮಗೆ ಸಹಕಾರಿಸುತ್ತಾನೆ.

ಆದ್ದರಿಂದ ಮುಂದಿನ ಸಲ ಗೆಳೆತನ ಬೇಳೆಸುವಾಗ "ಗುಣ ನೋಡಿ ಗೇಳೆತನ ಮಾಡು" ನೆನಪಿರಲಿ!!!!

bottom of page