top of page

Our Recent Posts

Archive

Tags

ಮಿಂಚಿ ಹೋದ ಕಾಲಾಕ್ಕೆ ಚಿಂತಿಸಿ ಫಲವೇನು?


"ಕಾಲವನ್ನು ಹಿಡಿಯೋರು ಇಲ್ಲ.." ಈ ಸಿನಿಮಾ ಹಾಡು ಹೇಳಿದಂತೆ ಕಾಲವನ್ನು ತಡೆಯುವ ಶಕ್ತಿ ಯಾರಿಗಿದೆ? ಕಳೆದುಕೊಂಡ ಸಮಯದ ಬಗ್ಗೆ ಚಿಂತೆ ಮಾಡಿಕೊಂಡು ಕುಳಿತರೆ ಉಪಯೋಗವಿಲ್ಲ ಎಂಬ ಮಾತನ್ನು ಈ ಗಾದೆ ಹೇಳುತ್ತದೆ.

ನಾವು ಕಾಲ ಕಾಲದಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ, ಕಾಲಾಂತರದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಯೋಚನೆಗಳು ಬರುವುದು ಸಹಜ.

ಆದರೆ ಅಂಥಾ ಯೋಚನೆಗಳನ್ನು ಮನಸ್ಸಿನಲ್ಲಿ ಬೆಳೆಯಲು ಬಿಟ್ಟು, ಆದು ದೊಡ್ಧದಾಗಿ. ಅದರ ಬಗ್ಗೆ ಹಗಲು, ರಾತ್ರಿ ಯೋಚನೆಗೆ ಒಳಗಾಗಿ, ಅದೇ ನಮ್ಮನ್ನು ಕಬಳಿಸಿ ಕೊಳ್ಳುವಂತಾಗುತ್ತದೆ.

ಆ ಆಲೋಚನೆಗಳು ನಮ್ಮ ಮನಸ್ಸಿನ ಹಾಗು ದೇಹದ ಶಕ್ತಿಯನ್ನು ಹೀರಿಕೊಂಡು, ಕಾಲ ಮತ್ತು ಶಕ್ತಿಯ ವ್ಯಯವಾಗುವುದಲ್ಲದೇ ಬೇರಾವ ಉಪಯೋಗವೂಲ್ಲ.

ಕಾಲ ಚಕ್ರವನ್ನು ಹಿಂದಕ್ಕೆ ತಿರುಗಿಸಿ ಆ ಘಟನೆಯನ್ನು ಸರಿಪಡಿಸುವ ಶಕ್ತಿ ನಮಗೆ ಇಲ್ಲ.

"ನಾನು ಆಗ ಹಾಗೆ ಮಾಡಬಾರದಿತ್ತು", "ನನಗೆ ಹಾಗೆ ಆಗಬಾರದಿತ್ತು" ಹೀಗಿನ ಭವನೆ ಸಹಜ. ಆದರೆ ಮನಸ್ಥಿತಿಯಿಂದ ಹೊರ ಬರುವ ಮನೋಬಲ ಬೆಳೆಸಿಕೊಳ್ಳುವುದು ಅಭಿವೃಧಿಯ ಕಡೆಗೆ ಕರೆದೊಯ್ಯಬಹುದು.

ಹಿಂದೆ ನಡೆದದ್ದರಿಂದ ಪಾಠ ಕಲಿತು, ಮುಂದೆ ಆ ತಪ್ಪು ನಡೆಯದಂತೆ ನೋಡಿಕೊಳ್ಳುದು ಜಾಣರ ಲಕ್ಷಣ.

ಚಿಂತಿಸುತ್ತಾ ಕುಳಿತರೆ ಏನೂ ಪ್ರಯೋಜನವಿಲ್ಲ ಎನ್ನುವುದು ಈ ಗಾದೆಯ ಸಾರವಾಗಿದೆ.

bottom of page