top of page

Our Recent Posts

Archive

Tags

ದೂರದ ಬೆಟ್ಟ ನುಣ್ಣಗೆ


ಮಲೆನಾಡಿನ ಒಂದು ಬೆಟ್ಟದಲ್ಲಿ ನಿಂತು ದೂರದ ಇನ್ನೊಂದು ಬೆಟ್ಥವನ್ನು ನೋಡಿದರೆ ಎಷ್ಟು ಚೆನ್ನಾಗಿ ಕಾಣುತ್ತದೆ ಅಲ್ಲವೇ? ಯಾವ ಏರು ತಗ್ಗುಗಳಿಲ್ಲದೆ ಆ ದೂರದ ಗುಡ್ಡ ಸಮತಟ್ಟಾದ ಪ್ರದೇಶವನ್ನು ಹೊಂದಿದೆಯೆಂದೆನಿಸುತ್ತದೆ.

"ಆಹಾ! ಅಲ್ಲಿ ಹೋದರೆ ಏಷ್ಟು ಚೆನ್ನ, ಯಾವ ಮುಳ್ಳು ಇಲ್ಲ, ಯಾವ ಕಡಿದಾದ ಪ್ರಪಾತವೂ ಇಲ್ಲ!" ಎನ್ನುವ ಭಾವನೆ ಬರುವುದು ಸಹಜ.

ಹಾಗೆ, ಮನಸ್ಸು ಮಾಡಿ, ಆ ದೂರದ ಬೆಟ್ಟದೆಡೆಗೆ ಪ್ರಯಾಣ ಬೆಳೆಸಿ, ಆ ಬೆಟ್ಟ ತಲುಪಿದರೆ ಅಲ್ಲಿ ಕಾಣುವುದೇನು?

ಅದೆೇ ಪ್ರಪಾತ, ಅದೇ ಮುಳ್ಳು, ಅದೇ ಬೇರೆ ಬೇರೆ ಗಾತ್ರದ ಮರಗಳು, ಅದೇ ಎತ್ತರ ತಗ್ಗುಗಳು. ದೂರದಿಂದ ಅದು ಹೇಗೆ ಸುಂದರವಾಗಿ ಕಂಡಿತು ಎನ್ನುವ ಸೋಜಿಗ!

ಈ ಸೋಜಿಗ ನಮ್ಮ ಜೀವನದಲ್ಲಿ ಆಗಾಗ ನಡೆಯುತ್ತಿರುತ್ತದೆ. ಬೆೆೇರಯವರು ಮಾಡುವ ಕೆಲಸ ನಮಗೆ ಸುಲಭವೆನಿಸುತ್ತದೆ. ಬೇರೆಯವರಿಗೆ ದೊರೆತ ವಸ್ತು ತುಂಬಾ ಒಳ್ಳೆದೆನಿಸುತ್ತದೆ. ತನ್ನಲ್ಲಿರುವ ವಸ್ತು ಅಷ್ಟೇನು ಸುಂದರವಿಲ್ಲವೆಂದೆನಿಸುತ್ತದೆ. ಹಾಗೆನಿಸಿ, ಆ "ಸುಂದರ" ವಸ್ತುವನ್ನು ನಮ್ಮದಾಗಿಸುತ್ತಲೇ ಅದೇ ವಸ್ತು ಸುಂದರವಾಗಿ ಕಾಣುವುದಿಲ್ಲ.

ನಮ್ಮ ಮನೆಗಿಂತಲೂ ಬೇರೆಯವರ ಮನೆ ಚೆಂದ. ನಮ್ಮ ಕೆಲಸಕ್ಕಿಂತ ಗೆಳೆಯನ ಕೆಲಸ ಸುಲಭ.

ಆದರೆ ವಾಸ್ತವದಲ್ಲಿ ಅವರವರಿಗೆ, ಅವರವರ ಕಷ್ಟಗಳು ಇದ್ದೇ ಇರುತ್ತವೆ. "ಇರುವಿದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಎಂದು ಕವಿ ಹೇಳಿದಂತೆ ನಮ್ಮ ಮನುಷ್ಯನ ಭಾವನೆಗಳೇ ಕ್ಲಿಷ್ಟ.

bottom of page