ಕೈ ಕೆಸರಾದರೆ ಬಾಯಿ ಮೊಸರು
- kannadambalge
- Aug 29, 2016
- 1 min read
Updated: Aug 9, 2021
ನಮ್ಮ ಹಿಂದಿನ ತಲೆಮಾರಿನವರ ಜಾಣ್ಮೆಯ ಸತ್ವವೇ ಗಾದೆ. ಗಾದೆಗಳನ್ನು ವೇದಕ್ಕಿಂತಲೂ ಮಿಗಿಲು ಎನ್ನಬಹುದು. ಗಾದೆಗಳಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.
ಈ ಮೇಲಿನ ಗಾದೆಯು ನಮ್ಮ ಜೀವನದಲ್ಲಿ ಪರಿಶ್ರಮದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಯಾರ ಕೈ ಕಠಿಣ ಕೆಲಸದಿಂದ ಕೆಸರಾಗುತ್ತದೆಯೋ ಅವರ ಬಾಯಿಗೆ ಸಿಹಿಯಾದ ವಸ್ತು ಸಿಗುತ್ತದೆ ಅನ್ನುವುದು ಈ ಗಾದೆಯ ಅರ್ಥ.
ನಾವು ನಮ್ಮ ನಮ್ಮ ಕೆಲಸವನ್ನು ಪೂರ್ಣ ಮನಸ್ಸಿನಿಂದ, ಸಂಪೂರ್ಣ ಧ್ಯಾನದಿಂದ ಮಾಡಿದರೆ ಮಾತ್ರ ನಮಗೆ ಅದರ ಫಲ ಸಿಗುತ್ತದೆ. ಅದೇ ಸುಮ್ಮನೆ ಕಷ್ಟಪಡದೆ, ಅರಾಮವಾಗಿ ಇದ್ದು, ನಮಗೆ ಒಳ್ಳೆಯ ಪ್ರತಿಫಲ ಸಿಗಬೇಕು ಎಂದು ಬಯಸಿದರೆ ಆಗದು. ವಿದ್ಯಾರ್ಥಿಯು ತನ್ನ ಪಾಠಗಳನ್ನು ಚೆನ್ನಾಗಿ ಓದಿ, ಶ್ರಮಪಟ್ಟು ಕೆಲಸಮಾಡಿದರೆ ಅವನಿಗೆ ಒಳ್ಳೆಯ ಫಲಿತಾಂಶ ಖoಡಿತ ಬರುತ್ತದೆ.
ಕಷ್ಟಪಟ್ಟು ದುಡಿದರೆ ನಮ್ಮ ಗುರಿ ಮುಟ್ಟುವುದು ಖಂಡಿತ ಎನ್ನುವಿದು ಈ ಗಾದೆಯ ಮುಖ್ಯ ಸಂದೇಶವಾಗಿದೆ.
Comments