ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ
ಒಂದು ರಾಜನ ಅಸ್ಥಾನದಲ್ಲಿ ಒಂದು ದೇವಸ್ಥಾನದ ಪೂಜಾರಿ ಒಬ್ಬನ್ನು ಕರೆದುಕೊಂಡು ಬಂದು, ತನ್ನ ಅಳಲನ್ನು ಹೇಳುತ್ತಾನೆ. ಆ ಮನುಷ್ಯನು, ಪೂಜಾರಿಯು ಇರುವ ದೇವಸ್ಥಾನದ ಆನೆಯನ್ನು ಕದಿದ್ದು, ಊರಿನ ಜನ ಪೂಜಾರಿಯನ್ನು ಆ ಕಳ್ಳತನದ ಬಗ್ಗೆ ದೂಶಿಸುತ್ತಿದ್ದರು.
ಅರಸನು ಕಳ್ಳನಿಗೆ ಶಿಕ್ಷೆ ಕೊಟ್ಟರೆ ಆ ಆಪಾದನೆಯಿಂದ ತಾನು ಪಾರುಗುತ್ತೇನೆ ಎಂದ ಪೂಜಾರಿ. ರಾಜನು ತನ್ನ ಜವಾಬ್ದಾರಿಯಂತೆ, ಅವನ್ನು ವಿಚಾರಿಸಿ, ಅವನು ಕದ್ದಿದ್ದಾನೆ ಎಂದು ಖಚಿತವಾದ ಮೇಲೆ, ಆ ಕಳ್ಳನಿಗೆ ಶಿಕ್ಷೆ ವಿಧಿ
ಸುತ್ತಾನೆ.
ಕೆಲ ದಿನಗಳ ನಂತರ, ರಾಜನ ಎದುರಿಗೆೊಂದು ವಿಶೇಷವಾದ ಸಂದರ್ಭ ಎದುರಾಯಿತು. ಒಂದು ರೈತ, ತನ್ನೊಂದಿಗೆ ಇನ್ನೊಬ್ಬನನ್ನು ಕೈ ಕಾಲು ಕಟ್ಟಿ ಎಳೆದುಕೊಂಡು ಬಂದನು. ವಿಚಾರಿಸಿದಾಗ ತಿಳಿದದ್ದು ಇದು. ರೈತ ಬೆಳೆದು, ವಣಗಿಸಿದ್ದ ಒಂದು ಅಡಿಕೆಯನ್ನು ಇವನು ಕದ್ದುಕೊಂಡಿದ್ದನು. ಆ ಕಳ್ಳನಿಗೆ ಶಿಕ್ಷೆಕೊಡಬೇಕೆಂದು ನಿವೇದಿಸಿದನು.
ಈತನನ್ನ ಕಳ್ಳನೆಂದು ಪರಿಗಣಿಸಬಹುದೇ ಇಲ್ಲವೇ ಎಂದು ರಾಜನಿಗೆ ನಿರ್ಧರಿಸಲು ಅಗಲಿಲ್ಲ. ಇವನು ಕದ್ಧದ್ದು ಬರೀ ಒಂದು ಅಡಿಕೆಯನ್ನು. ಆದ್ದರಿಂದ ತನ್ನ ಮಂತ್ರಿಗಳನ್ನು ಸೇರಿಸಿ ಸಮಾಲೋಚಿಸಿದನು. ಮಂತ್ರಿಗಳು ಹೇಳಿದಂತೆ, ಆನೆ ಕದ್ದ ಕಳ್ಳನಿಗೆ ಕೊಟ್ಟ ಶಿಕ್ಷೆಯಂತೆ, ಈ ಅಡಿಕೆ ಕಳ್ಳನಿಗೂ ಶಿಕ್ಷೆ ವಿಧಿಸಿದನು.
ಈ ಗಾದೆಯು ನಮನ್ನು ಸಣ್ಣ ಸಣ್ಣ ತಪ್ಪು ಕಾರ್ಯವನ್ನು ಮಾಡುವುದನ್ನು ನಿಲ್ಲಿಸವ ಉದ್ದೇಶ ಹೊಂದಿದೆ. ತಪ್ಪು ಎಷ್ಟೇ ಚಿಕ್ಕದಾದರೂ ಅದು ತಪ್ಪೇ ಎಂದು ಹೇಳುತ್ತದೆ. ಆನೆಯಂಥಾ ದೊಡ್ಡದ್ದನ್ನು ಕದ್ದರೂ ಕಳ್ಳನೇ, ಒಂದು ಚಿಕ್ಕ ಅಡಿಕೆ ಕದ್ದರೂ ಕಳ್ಳನೇ ಎಂಬ ಸತ್ಯವನ್ನು ಈ ಗಾದೆ ಸಾರುತ್ತದೆ.
Comentários