ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ
ಎರಡು ಕೋಣೆಗಳ ನಡುವೆ ಒಂದು ಗೋಡೆ ಇದೆ. ಆ ಗೋಡೆಯ ಮೇಲೆ ಒಂದು ದೀಪವನ್ನು ಇರಿಸಿದೆ. ಆ ದೀಪದ ಬೆಳಕು ಅತ್ತ ಕಡೆಯ ಕೊಠಡಿಗೂ ಸಂಪೂರ್ಣವಾಗಿ ಬೀಳುವುದಿಲ್ಲ. ಇತ್ತ ಕಡೆಯ ಕೊಠಡಿಗೂ ಸಂಪೂರ್ಣವಾಗಿ ಹೋಗುವುದಿಲ್ಲ. ಎರಡೂ ಭಾಗಕ್ಕೆ ಸಂಪೂರ್ಣ ಬೆಳಕು ಬರುವುದಿಲ್ಲ.
ಕೆಲವು ಸಂಧರ್ಭಗಳಲ್ಲಿ, ಮನುಷ್ಯರ ಮಾತು ಹಾಗೆ ಎಂದೆನಿಸುತ್ತದೆ. ಎರಡು ಕಡೆಯ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರಕುವುದಿಲ್ಲ. ಯಾವುದೇ ವಿಷಯದ ಬಗ್ಗೆ ಸಂಪೂರ್ಣ ವಿಷಯ ತಿಳಿದುಕೊಳ್ಳದಂತೆ ವಿವೇರಣೆ ಸಿಗುತ್ತದೆ. ಇಂತಹ ಸಂಧರ್ಭದಲ್ಲಿ ಈ ಗಾದೆಯನ್ನು ಬಳಸಲಾಗುತ್ತದೆ.
ಈ ಗಾದೆಯಂತೆ "ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ" ಗಾದೆಯನ್ನು ನೆನೆಯಬಹುದು. ನಮಗೆ ಅತ್ತಕಡೆಯೂ ಬೇಕು, ಇತ್ತ ಕಡೆಯೂ ಬೇಕು. ಯಾವ ಕಡೆಯನ್ನು ಬಿಟ್ಟು ಕೊಡಲು ನಮಗೆ ಮನಸಿಲ್ಲ. ಇಂಥ ಪರಿಸ್ಥಿಯ ಸಂಭಾಷಣೆಯಲ್ಲಿ ನಾನು "ಅಡ್ಡಗೋಡೆಯ ಮೇಲೆ ದೀಪ" ಇರುಸುತ್ತೇವೆ.
Comments