ಅತಿಯಾದಾಗ ಹಾಲೂ ವಿಷ
ನಾಮಗೆಲ್ಲರಿಗೂ ನಮ್ಮ ಅಮ್ಮ ಕೊಡುತ್ತಿದ್ದ ರುಚಿ ರುಚಿಯಾದ ಬೆಚ್ಚಗಿನ ಹಾಲು ಮರೆಯಲು ಸಾಧ್ಯವಿಲ್ಲ. ನಾನೇಕೆ ಕುಡಿಯಬೇಕೆಂದು ಪ್ರಶ್ನಿಸಿದಾ ಅಮ್ಮ ಹೇಳುತ್ತಿದ್ದದ್ದು ಅದು ನಮ್ಮ ದೇಹದ ಬೆಳವಣಿಗೆಗೆ ಒಳ್ಳೆಯದು ಎಂದು ಅಲ್ಲವೇ?
ಹಾಗೆಂದು ಬರೀ ಹಾಲನ್ನೆ ಮೂರು ಹೊತ್ತು ಕುಡಿದರೆ ಆದೀತೇ? ಬೇರೇನನ್ನು ತಿನ್ನದೇ ಬೆಳಗ್ಗಿನ ತಿಂಡಿ, ಮಧ್ಯಾನ್ಹದ ಮತ್ತು ರಾತ್ರಿಯ ಊಟದ ಬದಲಿಗೆ ಬರೀಯ ಹಾಲನ್ನು ಕುಡಿದರೆ? ಹೊಟ್ಟೆ ಕೆಟ್ಟು ವೈದ್ಯರಲ್ಲಿಗೆ ಹೋಗುವ ಪರಿಸ್ಥಿತಿ ಉಂಟಾಗಬಹುದು.
ನಮ್ಮ ಜೀವನದಲ್ಲಿ ಎಲ್ಲವೂ ಒಂದು ಮಿತಿಯಲ್ಲಿ ಇದ್ದರೆ ಅದಕ್ಕೆ ಗೌರವ. ಜಾಸ್ತಿಯಾದರೆ ಅದರ ಬಗ್ಗೆ ಅಸಡ್ಡೆ ಮೂಡುತ್ತದೆ. ಊಟದ ಮಾಡುವಾಗ ಸಿಹಿ ವಸ್ತುಗಳ ನಡುವೆ, ಸ್ವಲ್ಪ ಉಪ್ಪಿನಕಾಯಿಯನ್ನು ನೆಚ್ಚಿಕೊಂದರೆ ಇನ್ನೂ ರುಚಿಕರವಾಗುವುದು ಸತ್ಯ.
ಜೇವನದಲ್ಲಿ ಸುಖವೇ ಇದ್ದು ಸ್ವಲ್ಪವೂ ಕಷ್ಟ, ದುಃಖ ಇಲ್ಲದಿದ್ದರೆ ಸುಖದ ಮಹತ್ವ ತಿಳಿಯುವುದಿಲ್ಲ.
ಈ ಗಾದೆಯನ್ನು "ಅತಿಯಾದ ಅಮೃತವೂ ವಿಷ" ಎಂದು ಹೇಳುತ್ತಾರೆ. ಅಮೃತ ದೊರಕಿತೆಂದು ಪಾತ್ರೆ ಖಾಲಿಯಾಗುವವರೆಗೆ ಕುಡಿದರೆ ಅದೂ ವಿಷವಾಗಿ ಮಾರ್ಪಾಡಾಗುವುದಲ್ಲಿ ಸಂಷಯವಿಲ್ಲ.
ಎಲ್ಲವನ್ನು ಮಿತಿಯಲ್ಲಿ ಇಡುವುದರ ಬಗ್ಗೆ ಈ ಗಾದೆಯು ನಮಗೆ ಪಾಠನೀಡುತ್ತದೆ.
Comments