ಬುದ್ದಿವಂತನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು
ಅವರವರ ಭಾವಕ್ಕೆ, ಅವರವರ ಶಕ್ತಿಗೆ ತಕ್ಕಂತೆ ಎಂಬುವ ಒಂದು ಮಾತಿದೆ. ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಾವು ಈ ಜಗತ್ತನ್ನು ನೋಡುತ್ತೇವೆ, ತಿಳಿದುಕೊಳ್ಳುತ್ತೇವೆ. ಅದೇ ರೀತಿ ನಮ್ಮ ವಿಚಾರವನ್ನು ಬೇರೆಯವರಿಗೆ ತಿಳಿಸುವಲ್ಲಿ,ತಿಳಿಯಪಡಿಸುವಲ್ಲಿ ಅವರ ಮನಸ್ಥಿತಿಯ ಬಗೆಗೂ ಧ್ಯಾನ ವಹಿಸಬೇಕಾಗುತ್ತದೆ. ಅದರಲ್ಲೂ ಬುದ್ದಿಮಾತು ಹೇಳುವುದರಲ್ಲಿ ಅಥವಾ ಒಳ್ಳೆಯ ನಡತೆಯ ಬಗ್ಗೆ ಒಪ್ಪಿಸುವ ಹೇಳಿಕೆಯಲ್ಲಿ, ಎದುರಿನವರ ಮನಸ್ಥಿತಿ ಮುಖ್ಯವಾಗಿರುತ್ತದೆ. ತುಂಬಾ ಚುರುಕಿನ ಅವರಿಗೆ ಮಾತಿನಲ್ಲಿ ಹೇಳಿದರೆ ಅರ್ಥವಾಗುತ್ತದೆ. ಮಂದ ಬುದ್ಧಿಯವರಿಗೆ ಮಾಡಿ ತೋರಿಸಬೇಕಾಗುತ್ತದೆ.
ಒಂದು ಕಥೆಯಲ್ಲಿ ಬರುವಂತೆ ವೃದ್ಧರು ಊರಿನ ಯುವಕರನ್ನು ಸರಿದಾರಿಗೆ ತರ ಬೇಕಾದಲ್ಲಿ ಹೀಗೊಂದು ಉಪಾಯ ಹೂಡಿದರಂತೆ. ಯುವಕರ ಬುದ್ದಿವಂತಿಕೆಗೆ ಅನುಸಾರ ಎರಡು ತಂಡಗಳಾಗಿ ವಿಂಗಡಿಸಿದರಂತೆ. ಬುದ್ಧಿವಂತರ ತಂಡಕ್ಕೆ ಒಳ್ಳೆಯ ಮಾತಿನಲ್ಲಿ ಹೇಳಿದರಂತೆ. ದಡ್ಧರ ಗುಂಪಿಗೆ ದೊಣ್ಣೆಯನ್ನು ತೋರಿಸಿ ಹೆದರಿಸಿ ಸರಿ ನಡತೆಯ ಬಗ್ಗೆ ಮನವರಿಕೆ ಪಡಿಸಿದರಂತೆ.
ಈ ಬುದ್ಧಿವಂತಿಕೆಯ ಸಾರವೇ ಈ ಗಾದೆ.
ಎಲ್ಲರನ್ನೂ ಒಂದೇ ರೀತಿಯಲ್ಲಿ ಸಂಬಳಿಸಲು ಆಗದು. ಅವರ ಸಾಮರ್ಥ್ಯಕ್ಕೆ ಅನುಸಾರ ನಮ್ಮ ರೀತಿಯನ್ನು ಬದಲಿಸ ಬೇಕಾಗುತ್ತದೆ
Comentarios