top of page

Our Recent Posts

Archive

Tags

ದೇಶ ಸುತ್ತು, ಕೋಶ ಓದು

ಈ ಗಾದೆಯು, ಜೀವನವನ್ನು ಹೇಗೆ ಸಂಪೂರ್ಣವಾಗಿ ಸಾರ್ಥಕವಾಗಿ ಅನುಭವಿಸುವ ಗುಟ್ಟನ್ನು ಹೇಳುತ್ತದೆ. ಜೀವನಾನುಭವವನ್ನು ಪಡೆಯಲು

ಈ ಎರಡು ಕಾರ್ಯಗಳನ್ನು ಮಾಡುವುದು ಉತ್ತಮ. ಒಂದು, ಬೆೇರೆ ಬೇರೆ ಪ್ರದೇಶವನ್ನು ಸಂದರ್ಷಿಸಿ ಅಲ್ಲಿನ ಸಮಾಜ, ಜನರ ಜೀವನ ಶೈಲಿಯನ್ನು ಅನುಭವಿಸುವುದು. ಇನ್ನೊಂದು ಬೇರೆ ಬೇರೆ ವಿಚಾರಗಳ ಬಗ್ಗೆ ಪುಸ್ತಕಗಳನ್ನುಓದುವುದು.



ಬೇರೆ ಸ್ಥಳವನ್ನು ಭೇಟಿ ನೀಡಿದಾಗ, ಅಲ್ಲಿಯ ಜನರಂತೇ ನಾವೂ ಸ್ವಲ್ಪ ದಿನ ಬದುಕುವುದು. ಕಾಡಿನ ಪ್ರದೇಶಕ್ಕೆ ಹೋಗಿ, ಅಲ್ಲಿನ ಜೀವನ ರೀತಿಯಲ್ಲಿ ಬದುಕುವುದು. ಗುಡ್ಡ ಪ್ರದೇಶಕ್ಕೆ ಹೋಗಿ, ಗುಡ್ಡದ ಅನುಭವ ಪಡೆಯುವುದು. ಕರಾವಿಳಿಗೆ ತೆರಳಿ ಅಲ್ಲಿನ ಅನುಭವವನ್ನು ಆನಂದಿಸುವುದು. ಹೀಗೆ ಹಲವಾರು ಸ್ಥಳವನ್ನು ನೋಡಿ, ಅಲ್ಲನ ವೈಶಿಷ್ಠ್ಯತೆಯನ್ನು ಅನುಭವಸಿದರೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ. ನಮ್ಮ ಯೋಚನಾ ರೀತಿ ಬದಲಾಗುತ್ತದೆ. ನಾವು ಕೂಪ ಮಂಡೂಕಗಳಾಗದೇ ಲೋಕದ ಜ್ಞಾನ ಪಡೆಯುತ್ತೇವೆ.


ಈ ಭೂವಿಯ ಎಲ್ಲಾ ಉರು, ದೇಶಗಳನ್ನು ಸಂದರ್ಷಿಸುವುದು ಅಸಾಧ್ಯ. ಹಾಗಾದರೆ ಏನು ಮಾಡುವುದು? ಕೈ ಕಟ್ಟಿಕೊಂಡು ಕುಳಿತುಕೊಳ್ಳುದೆ?


ಇಲ್ಲ! ಅಂಥಾ ದೇಶ ಬಗ್ಗೆ ಕೋಶ (ಪುಸ್ತಕ) ವನ್ನು ಓದುವುದು ಆ ಪ್ರದೇಶವನ್ನು ನೋಡಿದಷ್ಟೆ ಒಳ್ಳೆಯದು. ಪ್ರವಾಸ ಕಥನ, ಜೀವನ ಚರಿತ್ರೆಗಳು ನಮ್ಮ ಅನುಭವಗಳ ಬೇಳವಣಿಗೆಗೆ ಸಾಧ್ಯವಾಗುತ್ತವೆ. ನಮ್ಮ ತಪ್ಪುಗಳಲ್ಲದೇ ಬೇರೆಯವರ ತಪ್ಪುಗಳಿಂದ ಕಲಿಯುವ ಅವಕಾಶ ಸಿಕ್ಕಂತಾಗುತ್ತದೆ. ಕೋಶವನ್ನೇ ಓದಬೇಕೆಂದೇನಿಲ್ಲ. ಈ ಗಾದೆ ಹುಟ್ಟುವ ಕಾಲದಲ್ಲಿ ಜ್ಞಾನ ಪಡೆಯಲು ಒಂದೇ ವಿಧಾನವೆಂದರೆ ಪುಸ್ತಕ ಓದುವುದಾಗಿತ್ತು. ಆದರೆ ಈಗ ನಮಗೆ ಒದಲು, ತಿಳಿಯಲು ಬಗೆ ಬಗೆಯ ವಿಧಾನಗಳಿದ್ದಾವೆ. ಅಂತರ್ಜಲದ ಮೂಲಕ ಲೇಖನ(ಬ್ಲಾಗ್)ಗಳನ್ನು ಓದುವುದು, ವೀಡಿಯೋ ನೋಡುವುದು, ಮುಂತಾದವುಗಳು ಈ ಸಾಲಿಗೆ ಸೇರುತ್ತವೆ.


ದೇಶ ಸುತ್ತಿ, ಕೋಶ ಓದಿದರೆ, ನಾವು ಜೀವನವನ್ನು ನೋಡುವ ರೀತಿಯೇ ಬದಲಾಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.


ಆದ್ದರಿಂದ ಇವತ್ತಿನಿಂದಲೇ ಓದಲು ಶುರು ಮಾಡುವಿರಲ್ಲ?

Bình luận


bottom of page