ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ
- kannadambalge
- May 11, 2021
- 1 min read
ನಾವು ಜೀವನದಲ್ಲಿಆಸೆ ನಿರಾಸೆಗಳ ಬಗ್ಗೆ ಈ ಗಾದೆ ಸೂಚ್ಯವಾಗಿ ಹೇಳುತ್ತದೆ.
ಗಟ್ಟಿಯಾದ ಕಡಲೆಯನ್ನು ಜೀರ್ಣಿಸಿಕೊಳ್ಳಬೇಕಾದರೆ ನಮ್ಮ ಹಲ್ಲುಗಳುಗಟ್ಟಿಯಾಗಿ ಇರಬೇಕು. ಹಲ್ಲು ಸಡಿಲವಾಗಿದ್ದು, ನೋವಾಗುತ್ತಿದ್ದರೆ, ನಮ್ಮ ಬಳಿ ಇರುವ ಕಡಲೆಯನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲ. ಕಡಲೆಯು ಕೊಡುವ ಸಂತೋಷವನ್ನು ಸಂತೃಪ್ತಿಯನ್ನು ನಮಗೆ ಅನುಭವಿಸಲು ಸಾಧ್ಯವಿಲ್ಲ. ಆ ಕಡಲೆಯು ನಮ್ಮ ಬಳಿ ಇದ್ದರು ಇಲ್ಲದಿದ್ದ ಹಾಗೆ. ಕಾಲಕ್ರಮೇಣ ಹಾಳಾಗಬೇಕಷ್ಟೇ.
ನಮ್ಮಬಳಿ ಇಲ್ಲದಿರುವ ವಸ್ತುವಿನ ಬಗ್ಗೆ ನಮಗೆ ತುಂಬಾ ಆಸಕ್ತಿ. ನಮ್ಮ ಹಲ್ಲುಗಳು ಗಟ್ಟಿಯಾಗಿವೆ. ಆದರೆ ತಿನ್ನಲು ಕಡಲೆಯಿಲ್ಲ. ಆಗಲೂ ನಮಗೆ ಕಡಲೆ ಕೊಡುವ ಸಂತೋಷ, ಸುಖದ ಅನು

ಭವ ಪಡೆಯಲು ಅಸಾಧ್ಯ.
ಈ ಎರಡು ಸಂದರ್ಭಗಳಲ್ಲಿ ಕಡಲೆಯ ರುಚಿಯ ಅನುಭವ ಶೂನ್ಯ. ನಮ್ಮ ಜೀವನದಲ್ಲಿ ನಮಗೆ ದೊರಕದ ವಸ್ತು, ನಮ್ಮಲ್ಲಿದ್ದೂ ಅನುಭವಿಸಲಾಗದ ಸಂದರ್ಭದ ವಿಪರ್ಯಾಸವನ್ನು ಈ ಗಾದೆ ಹೇಳುತ್ತದೆ.
ತನ್ನ ತಂದೆಯ ಪ್ರಭಾವದಿಂದ ದೊರತ ಕಾಲೇಜಿನ ಪಾಠದಲ್ಲಿ ಒಬ್ಬನಿಗೆ ಕಿಂಚಿತ್ ಗೌರ
ವ ವಿಲ್ಲ. ಓದುವ ಮನಸ್ಸೂ ಇಲ್ಲ. ಅದೇ ಓದುವ ಹಂಬಲ ಇರುವ ಒಳ್ಳೆಯ ವಿದ್ಯಾರ್ಥಿಗೆ ಚೆನ್ನಗಿರುವ ಕಾಲೇಜಿನ ಪ್ರವೇಷದೊರಕದು. ಈಗ "ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ" ಎನ್ನುವುದು ಸರಿ ತಾನೆ?
Comments