ಹಿತ್ತಲ ಗಿಡ ಮದ್ದಲ್ಲ!!
- kannadambalge
- Jun 18, 2018
- 1 min read
Updated: Sep 1, 2021



ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಗಿಡ, ಮರಗಳ ಬಗ್ಗೆ ನಮಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ. ತಮ್ಮ ತಮ್ಮ ಬಳಿ ಇರುವ ವಸ್ತುಗಳಿಗೆ ನಮ್ಮ ಮನಸ್ಸಿನಲ್ಲಿ ಬೆಲೆ ಇರುವುದಿಲ್ಲ ಎನ್ನುವುದು ಈ ಗಾದೆಯ ಗುಟ್ಟು. ಹಳೆಯ ಕಾಲದಲ್ಲಿ ಎಲ್ಲ ರೋಗಗಳಿಗೆ ಗಿಡಮೂಲಿಕೆಗಳಿಂದಲೇ ಔಷಧಿಯನ್ನು ತಯಾರಿಸುತ್ತಿದ್ದರು. ಹಾಗಿರಿವಾಗ, ತಮ್ಮ ಮನೆಯ ಬಳಿ ಬೆಳೆದ ಗಿಡ/ಮರದಿಂದ ಮಾಡಿದ ಮದ್ದನ್ನು ಯಾರು ಒಳ್ಳೆಯದೆಂದು ಪರಿಗಣಿಸುತ್ತಿರಲಿಲ್ಲ. ಅದನ್ನು ಕ್ಷುಲ್ಲಕವಾಗಿ ಕಾಣುತಿದ್ದರು. ಅದೇ ಔಷಧಯನ್ನು ಬೇರೆಯವರ ತೋಟದಲ್ಲಿ ಬೆಳೆದ ಗಿಡದಿಂದ ಮಾಡಿದರೆ ಅದನ್ನು ತುಂಬ ಜಾಗ್ರತೆಯಿಂದ, ತುಂಬ ಬೆಲೆಕೊಡುತ್ತಿದರು. ಅದರಿಂದ ಆ ಗಾದೆ ಹುಟ್ಟಿದೆ. ಈ ಕಾಲದಲ್ಲು ನಾವು ಇಂಥ ನಡವಳಿಕೆಯನ್ನು ತುಂಬ ಕಾಣುತ್ತೇವೆ. ತಮಲ್ಲಿ ಇರುವ ಪ್ರತಿಭೆಯನ್ನು ಗುರುತಿಸಕೊಳ್ಳದೆ, ಬೇರೆಯವರಲ್ಲಿ ಇರುವುದನ್ನು ಕಂಡು ಕೊಂಡು, ಖಿನ್ನ ಮನಸ್ಕರಾಗುವುದು ಸರ್ವೇ ಸಾಮಾನ್ಯವಾಗಿದೆ. ತಮ್ಮ ಬಳಿ ಇರುವ ಅತೀ ಬೆಲೆಬಾಳುವ ವಸ್ತುವನ್ನು ಕಡೆಗಣಿಸಿ, ಬೇರೆಯವರ ವಸ್ತುವಿಗೆ ಆಸೆ ಮಾಡುವುದು ಮನುಷ್ಯನ ಸಾಮಾನ್ಯ ಗುಣವಾಗಿದೆ. ನಮಗೆ ಸುಲಭವಾಗಿ ದೊರಕುವುದು ಕೇವಲವೆಂದು ಭಾವಿಸುವುದು ಸರಿಯಲ್ಲ. ಕಷ್ಟಪಟ್ಟು ದೊರಕುವುದರ ಬೆಲೆ ನಮಗೆ ಸರಿಯಾಗಿ ತಿಳಿದಿರುತ್ತದೆ. ಈ ಗಾದೆಯ ಅರ್ಥವನ್ನು ಸರಿಯಾಗಿ ತಿಳಿದುಕೊಂಡು ನಮಲ್ಲಿ ಇರುವ ವಸ್ತುವಿಗೆ ಸರಿಯಾದ ಬೆಲೆನೀಡಬೇಕು.
Comments