ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ!
ನಮ್ಮ ಹಿಂದಿನ ತಲೆಮಾರಿನವರ ಜಾಣ್ಮೆಯ ಸತ್ವವೇ ಗಾದೆ. ಗಾದೆಗಳನ್ನು ವೇದಕ್ಕಿಂತಲೂ ಮಿಗಿಲು ಎನ್ನಬಹುದು. ಗಾದೆಗಳಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.
ತಿನ್ನುವ ವಾಸ್ತುಗಿಗೆ ರುಚಿಯ ಅನುಸಾರ ಉಪ್ಪು ಇಲ್ಲದಿದ್ದರೆ ಅದು ರುಚಿವೆನಿಸುವುದಿಲ್ಲ. ಎಷ್ಟೇ ವಸ್ತುವನ್ನು ಬಳಸಿ, ಎಷ್ಟೇ ಶ್ರಮವಹಿಸಿ ತಯಾರಿಸಿದರೂ, ಉಪ್ಪನ್ನು ಮರೆತರೆ, ತಿನ್ನಲು ಸಾಧ್ಯವಿಲ್ಲ. ಸಿಹಿತಿಂಡಿ ತಿನಿಸುಗಳಿಗೂ ಸ್ವಲ್ಪ ಪ್ರಮಾಣದ ಉಪ್ಪು ಬೇಕಾಗುತ್ತದೆ. ಆದರಿಂದ ಒಂದು ಅಡಿಗೆಯ ರುಚಿ ಉಪ್ಪಲ್ಲಿ ಅಡಿಗಿತ್ತದೆ ಎಂದರೂ ತಪ್ಪಾಗಲಾರದು.
ನಮ್ಮ ತಾಯಿ ನಮನ್ನು ಒಂಭತ್ತು ತಿಂಗಳು ಹೊತ್ತು, ಹೆತ್ತು ಬೆಳೆಸಿರುತ್ತಾಳೆ. ಏನೆೇ ಕಷ್ಟ ಕಾರ್ಪಣ್ಯ ಬಂದರು ನಮ್ಮಲ್ಲಿ ಧೈರ್ಯ ತುಂಬಿ ಮುಂದುವರಿಯುವಂತೆ ಮಾಡುತ್ತಾಳೆ. ನವೆಂದಾದರು ತಪ್ಪು ಮಾಡಿದರೆ, ಅದನ್ನು ತಿದ್ದಿ, ಸರಿ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾಳೆ. ನಮ್ಮ ಕಷ್ಟ ಕಾಲದಲ್ಲಿ, ಎಲ್ಲ ಬಂಧು ಮಿತ್ರರು ನಮ್ಮಿಂದ ದೂರವಾದರೆ, ನಮ್ಮ "ಅಮ್ಮ" ನಮ್ಮೊಂದಿಗೆ ಖಂಡಿತಾ ಇದ್ದು, ನಮಗೆ ನೈತಿಕ ಬೆಂಬಲ ನೀಡುತ್ತಾಳೆ. ಆದರಿಂದ ನಮ್ಮ ತಾಯಿಗಿಂತ ಮಿಗಿಲಾದ ಬಂಧುವಿಲ್ಲ ಎನ್ನಬಹುದು.
Comments