ಅತ್ತ ದರಿ - ಇತ್ತ ಹುಲಿ
ಒಬ್ಬ ವ್ಯಾಪಾರಿ ಕಾಡಿನಲ್ಲಿ ಹೋಗುತ್ತಿರುವಾಗ ಒಂದು ಹುಲಿ ಕಾಣಸಿಕ್ಕಿತು. ಜೀವ ಉಳಿಸಿಕೊಳ್ಳಲು ವ್ಯಾಪಾರಿ ಓಡತೊಡಗಿದನು. ಓಡುತ್ತಿರುವಾಗ
ಮುಂದೆ ನೋಡುತ್ತಾನೆ... ದೊಡ್ಡ ದರಿಯೊಂದು ಇದೆ (ದರಿ ಎಂದರೆ ದೊಡ್ಡದೊಂದು ಪ್ರಪಾತ, ).
ಅತ್ತ ನೋಡಿದರೆ ಹುಲಿ ಓಡೋಡಿ ಬರುತ್ತಿದೆ. ಇತ್ತ ನೋಡಿದರೆ ಆ ಪ್ರಪಾತದಲ್ಲಿ ಬಿದ್ದರೆ ಒಂದು ಮೂಳೆಯೂ ಉಳಿಯದು.
ನಮ್ಮ ಜೀವನದಲ್ಲಿಯೂ ನಾವು ಇಂಥಾ ಸನ್ನಿವೇಷ ಎದುರಿಸಬೇಕಾಗತ್ತದೆ. ಹೀಗೆ ಮಾಡಿದತೆ ಒಂದು ರೀತಿಯ ತೊಂದರೆ, ಹಾಗೆ ಮಾಡಿದರೆ ಇನ್ನೊಂದು
ರೀತಿಯ ಸಂಕಷ್ಟ. ಹೇಗೆ ಮಂದುವರಿಯ ಬೇಕೆಂಬುದೇ ದೊಡ್ಡ ಪ್ರಶ್ನೆಯಾಗುತ್ತದೆ. ಇಂಥಾ ಪರಿಸ್ತಿಥಿಯನ್ನು ವಿವರಿಸಲು ಇ ಗಾದೆಯನ್ನು ಬಳಸಲಾಗುತ್ತದೆ.
Comments