ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ
ಒಂದು ಆನೆಗೆ ಎಷ್ಟು ಪ್ರಮಾಣ ಆಹಾರ ಬೇಕಾಗುತ್ತದೆ ಎನ್ನುವುದು ನಮಗೆಲ್ಲಾ ಗೊತ್ತು. ಒಂದು ಹೊತ್ತಿಗೆ ಒಂದು ಸಣ್ಣ ಕಾಡನ್ನೇ ಖಾಲಿ ಮಾಡುವ ಶಕ್ತಿ ಆನೆಗೆ ಇರುತ್ತದೆ. ಅಂಥಾ ಆನೆಗೆ ಅಲ್ಪ ಸ್ವಲ್ಪ ಮಾಜ್ಜಿಗೆ ಸಿಕ್ಕರೆ ಅದರ ಹೊಟ್ಟೆಗೆ ಸಾಕಾದೀತೆ? ಅದರ ಜಟರಾಗ್ನಿಯನ್ನು ತಣಿಸಲು ಸಾಧ್ಯವೆ? ಆ ಮಜ್ಜಿಗೆ ಆನೆಯ ಹೊಟ್ಟೆಯ ಯಾವ ಮೂಲೆಗೂ ಅದು ಸಾಕಾಗುವುದಿಲ್ಲ.
ಬೃಹತ್ ಪ್ರಮಾಣದಲ್ಲಿ ಒಂದು ವಸ್ತು ಬೇಕಾಗಿದ್ದು,, ಬರೀ ಕಡಿಮೆ ಪ್ರಮಾಣ ದೊರಕ್ಕಿದ್ದರೆ ಈ ಗಾದೆಯನ್ನು ಉಪಯೊಗಿಸುತ್ತಾರೆ. ನಿಮಗೆ ತಿಳಿದಿರುವಂತೆ ನಮ್ಮ ನುಡಿಯನ್ನು ಸುಂದರವಾಗಿಯೂ, ಕಿವಿಗಳಿಗೆ ಇಂಪಾಗುವಂತೆ ಮಾಡಲು ಗಾದೆಯನ್ನು ಬಳಸುತ್ತಾರೆ. ನಮ್ಮ ಮಾತನ್ನು ಸೂಚ್ಯವಾಗಿ ಹೇಳಬೆಕಾದಲ್ಲಿ ಗಾದೆಗಳು ತುಂಬಾ ಸಹಾಯಕಾರಿ. ಅಂತೆಯೇ ನಮ್ಮಲ್ಲಿರುವ ವಸ್ತು ಏನೇನು ಸಾಲದು ಎಂದು ನಿದರ್ಷಿಸಲು "ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ" ಎನ್ನಬಹುದಾಗಿದೆ.
Comments