ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
- kannadambalge
- Jun 28, 2021
- 1 min read
ಅರೆರೆ! ಇದೇನಿದು? ನಾನು ಬೇರೆಯವರಿಗೆ ಕೊಟ್ಟದ್ದು ನನಗೆ ಹೇಗೆ ಸಿಗುವುದು? ಇದೇನಿದು ವಿಚಿತ್ರ ಅಂದುಕೊಂಡಿರಾ?
ನಮ್ಮ ಸನಾತನ ನಂಬಿಕೆಯ ಪ್ರಕಾರ ನಾವೆಷ್ಟು ಸಹಾಯ ಮಾಡುತ್ತೇವೆಯೋ ಅದರ ಹತ್ತು ಪಾಲು ನಮಗೆ ದೊರಕುತ್ತದೆ. ನಾನು ದಾರಿಯಲ್ಲಿ ಹೋಗುತ್ತಿರುವ ಭಿಕ್ಷುಕನಿಗೆ ಒಂದು ರೂಪಾಯಿಯನ್ನು ದಾನ ಮಾಡಿದರೆ ನಮಗೆ ಯಾವುದಾದರೊನದು ಬಗೆಯಲ್ಲಿ ನೂರು ರೂಪಾಯಿಯ ಲಾಭವಾಗುವುದು ಖಂಡಿತ. "ಒಳಿತು ಮಾಡು ಮನುಜ" ಎಂದು ಬಲ್ಲವರು ಹೇಳಿದಂತೆ, ನಾವೆಷ್ಟು ಒಳ್ಳದನ್ನು ಮಾಡುತ್ತೆವೆಯೋ ನಮಗೆ ಒಳ್ಳೆದಾಗುತ್ತದೆ.

ಆದ್ದರಿಂದ ಕೊಟ್ಟದ್ದು ನಮಗೆ ಮರಳಿ ಬರುವುದು ಖಂಡಿತ.
ಜಿಪುನತನದಿಂದ ಸ್ವಲ್ಪವೂ ದಾನ ಧರ್ಮವನ್ನು ಮಾಡದೇ, ಹಣವನ್ನು ಕೂಡಿಟ್ಟು ಬೇರೆಯವರ ಕಣ್ಣಿಂದ ಬಚ್ಛಿಟ್ಟರೆ ಅದನ್ನು ನಾವು ಅನುಭವಿಸುವುದಿಲ್ಲ. ಆ ಸಿರಿಯಿಂದ ನಾನು ಯಾವ ಸುಖವನ್ನು ಪಡೆಯುವುದಿಲ್ಲ. ಅದರಿಂದ ಯಾವ ಒಳ್ಳೆಯ ಕೆಲಸ ನಡೆಯದು.
ಬಚ್ಚಿಟ್ಟ ಸಂಪತ್ತುವು ನಮ್ಮ ಕಾಲದ ನಂತರ ಅದು ಯಾರಿಗೆ ದೊರಕುವುದೊ ಅವರು ಅದನ್ನು ಅನುಭವಿಸುತ್ತಾರೆ. ಅವರು ಅದರ ಉಪಯೋಗವನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ ನಾವು ಜಾಗ್ರತೆಯಿಂದ ಸೇರಿಸಿರಿಸಿದ್ದ ಸಂಪತ್ತಿನಿಂದ ಬೇರೆಯವರಿಗೆ ಉಪಯೋಗವಾಯಿತ್ತಲ್ಲವೇ?
ಅತಿಯಾದ ಆಸೆಯಿಂದ ಜಿಪುನತನ ಮಾಡದೇ ದಾನವನ್ನು ಸಪಾತ್ರರಿಗೆ ಕಾಲ ಕಾಲಕ್ಕೆ ಮಾಡುವುದು ಒಳ್ಳೆಯದೆಂದು ಈ ಗಾದೆಯ ಗುಟ್ಟು.
コメント