ಕೂಸು ಹುಟ್ಟುವ ಮೊದಲೇ ಕುಲಾವೆ ಹೊಲಿಸಿದ ಹಾಗೆ
"ತಿರುಕನ ಕನಸು" ಕಾಥೆ ನಿಮಗೆ ಗೊತ್ತೆ?
ಒಂದೂರಲ್ಲಿ ಒಬ್ಬ ಭಿಕ್ಷುಕನಿದ್ದನು. ಒಂದು ಮದ್ಯಹ್ನ ಮಲಗಿರುವಾಗ ಅವನಿಗೆ ಒಂದು ಕನಸು ಬಿತ್ತು. ಆ ಊರಿನ ರಾಜ ಸತ್ತುಹೋಗಿ, ಮುಂದಿನ ರಾಜನನ್ನು ನೇಮಿಸಲಿಕ್ಕೆ ಒಂದು ಆನೆಯ ಸೊಂಡಿಲಿಗೆ ಹೂವಿನ ಹಾರ ಕೊಟ್ಟರಂತೆ. ಆ ಆನೆಯು ನೇರವಾಗಿ ಈ ಭಿಕ್ಷುಕನ ಕುತ್ತಿಗೆಗೆ ಆ ಹಾರವನ್ನು ಹಾಕಿತಂತೆ. ಆ ಕ್ಷಣದಿಂದಲೇ ಆ ಭಿಕ್ಷುಕ ರಾಜನಾದನಂತೆ. ಮುಂದಿನ ದಿನಗಳಲ್ಲಿ ಎಲ್ಲರೂ ಅವನ ಸೇವ ಮಾಡುತ್ತಿದ್ದರಂತೆ. ಎನೋ ವಿಷಯಕ್ಕೆ ಭಿಕ್ಷುಕನಿಗೆ ಸಿಟ್ಟಿ ಬಂದು "ಹೋಗು ಇಲ್ಲಿಂದ" ಎಂದು ಕೈಯನ್ನು ಜೊರಾಗಿ ದೂಡಿದನಂತೆ. ಮಲಗಿದ್ದ ಭಿಕ್ಷುಕನ ಬಳಿ ಇದ್ದ ಒಂದೇ ಭಿಕ್ಷಾ ಪಾತ್ರೆ ಬಿದ್ದು ಚೂರಾಗಿ ಹೋಯಿತು. ಎಚ್ಚರಾದ ಭಿಕ್ಷುಕನು ತನ್ನ ಬಳಿ ಇದ್ದ ಒಂದೇ ಭಿಕ್ಷಾ ಪಾತ್ರೆ ಕಳೆದುಕೊಂಡು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡ. ಈ ಭಿಕ್ಷುಕನು ಮುಂದಿನ ಆಗುಹೋಗುಗಳ ಬಗ್ಗೆ ಯೋಚನೆ ಮಾಡಿ ತನ್ನ ಈಗನ್ನು ಹಾಳುಮಾಡಕೊಂಡಿದ್ದನು. ತನ್ನ ಹೆಂಡತಿ ಗರ್ಭವತಿ ಎಂದು ತಿಳಿದೊಡನೆಯೇ ಗಂಡನು ಮಗುವಿಗೆ ಬೇಕಾಗುವ ಬಟ್ಟೆ, ಕುಲಾವೆ (ಕಾಲುಚೀಲ), ಟೊಪ್ಪಿಗೆಗಳನ್ನು ಹೊಲಿಸಲು ಪ್ರಾರಂಭಿಸಿದನಂತೆ. ಮಗು ಗಂಡೊ-ಹೆಣ್ಣೊ, ದೊಡ್ಧಗಾತ್ರವಾಗಿರುವುದೋ-ಚಿಕ್ಕದ್ದಗಿರಿವುದೋ, ಆರೋಗ್ಯವಾಗಿರಿವಿದೋ-ಇಲ್ಲವೋ ತಿಳಿಯದು. ಆದರೂ ಆ ಮಗಿವಿಗೆ ಬೇಕಾಗುವ ವಸ್ತುಗಳು ತಯಾರಾಗುತ್ತಿದ್ದಾವೆ!! ಒಂದು ವಿಷಯದ ಬಗ್ಗೆ ನಮಗೆ ಹೆಚ್ಚು ತಿಳಿಯದು, ಆದರೆ ಅದರ ಬಗ್ಗೆ ತುಂಬಾ ತಯಾರಿ ಮಾಡುತ್ತಿರುವ ಸಂಧರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. ಇನ್ನೂ ಸ್ಪಷ್ಟವಾಗಿ ತಿಳಿಯದ ವಿಷಯದ ಬಗ್ಗೆ ತುಂಬಾ ಸಂಭ್ರಮದಿಂದ ಅತಿರೇಕದ ವ್ಯವಸ್ಥೆಯನ್ನು ಮಾಡುವುದು ಸರಿಯಲ್ಲ. ಎಲ್ಲವೂ ಇತಿ ಮಿತಿಯಲ್ಲಿದ್ದರೆ ಚೆಂದ, ಒಳಿತು ಎಂದು ಈ ಗಾದೆ ಹೇಳುತ್ತದೆ.
Comments