ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಒಂದು ಊರಿನಲ್ಲಿ ಒಬ್ಬ ರೈತನು ಒಂದು ಮುಂಗುಸಿಯನ್ನು ಸಾಕಿದ್ದನು. ಮುಂಗುಸಿಯು ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ರೈತನ ಹೆಂಡತಿಯು ಒಂದು ದಿನ ನೀರು ತರಲು ಹೊರಗೆ ಹೋಗಬೇಕಿತ್ತು. ರೈತನು ಮನೆಯಲ್ಲಿರಲಿಲ್ಲ. ತನ್ನ ಮಗುವನ್ನು ಯಾರು ನೋಡುವವರು ಎಂದು ಯೋಚಿಸುತ್ತಿರುವಾಗ ಎದುರಿಗೆ ಅವರ ಸಾಕು ಮುಂಗುಸಿ ಬಂದಿತು. ಮುಂಗುಸಿಯ ಬಳಿ ತನ್ನ ಮಗುವನ್ನು ನೋಡಿಕೊಳ್ಳಲು ಹೇಳಿ ರೈತನ ಹೆಂಡತಿಯು ನೀರು ತರಲು ಹೋದಳು. ಅವಳು ಹಿಂತಿರುಗಿ ಬರುವಾಗ ಮನೆಯ ಬಾಗಿಲಲ್ಲಿ ಮುಂಗುಸಿ ಕೂತಿದೆ, ಮುಂಗುಸಿಯ ಬಾಯಲ್ಲಿ ರಕ್ತ ತುಂಬಿದೆ. ಅದನ್ನು ನೋಡಿದ ರೈತನ ಹೆಂಡತಿ “ಅಯ್ಯೋ!!” ಎಂದು ಕೂಗಿ ತನ್ನ ಕೈಯಲ್ಲಿದ್ದ ಮಡಿಕೆಯನ್ನು ಮುಂಗುಸಿಯ ತಲೆಯ ಮೇಲೆ ಎಸೆದಳು. ಮುಂಗುಸಿ ತಕ್ಷಣ ಸತ್ತಿತ್ತು. ಅವಳು ಆ ಮುಂಗುಸಿಯು ತನ್ನ ಮಗುವನ್ನೇ ಕಚ್ಚಿ ತಿಂದಿದೆ ಎಂದು ಭಾವಿಸಿದಳು. ಗಾಬರಿಯಿಂದ ಮನೆಯೊಳಗೆ ಧಾವಿಸಿದಳು. ಆದರೆ ಅಲ್ಲೇನು ನೋಡುತ್ತಾಳೆ? ವಿಷಪೂರಿತವಾದ ಒಂದು ಹಾವು ಸತ್ತು ಬಿದ್ದಿದೆ. ತನ್ನ ಮಗುವನ್ನು ಆ ಹಾವಿಂದ ರಕ್ಷಿಸುವಾಗ ಮುಂಗುಸಿಗೆ ತುಂಬಾ ಗಾಯಗಳಾಗಿದ್ದವು. ಅದರಿಂದ ರಕ್ತ ಹೊರಬರುತ್ತಿತ್ತು. ಮುಂಗುಸಿಯು ಆ ಮಗುವಿಗೆ ಒಳಿತನ್ನೇ ಮಾಡಿತ್ತು ಕೆಟ್ಟದ್ದನ್ನು ಬಯಸಿರಲಿಲ್ಲ. ಆತುರದಿಂದ ನಿರ್ಣಯ ತೆಗೆದುಕೊಂಡು ಎಡವಿದ್ದಳು ಆ ರೈತನ ಹೆಂಡತಿ. ಈ ಗಾದೆಯ ನಮಗೆ ಜೀವನ ಪಾಠ ಕಲಿಸುತ್ತದೆ. ನಾವು ಕಂಡದ್ದೆಲ್ಲವೂ ಸತ್ಯ ಎಂದು ಭಾವಿಸುವುದು ಸರಿಯಲ್ಲ. ನಾವು ನಮ್ಮ ಕಣ್ಣಾರೆ ಕಂಡಿದ್ದರು ಅದರ ಬಗ್ಗೆ ಬಹುವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಈ ಗಾದೆಯ ಸಂದೇಶ. ರೈತನ ಹೆಂಡತಿಯ ಎರಡು ಹೆಜ್ಜೆ ಮುಂದುವರೆದು ಆ ಹಾವಿನ ದೇಹವನ್ನು ನೋಡಿದರೆ, ಸ್ವಲ್ಪ ಸಹನೆಯಿಂದ ವರ್ತಿಸಿದ್ದಾರೆ, ಆ ಮುಂಗುಸಿ ಬದುಕುತ್ತಿದ್ದು. ಅವಳಿಂದ ತಪ್ಪು ಕೆಲಸ ನಡೆಯುತ್ತಿರಲಿಲ್ಲ. ಕಣ್ಣಾರೆ ಕಂಡದ್ದು ಅರೆ ಸತ್ಯವಾಗಿರಬಹುದು. ಕಣ್ಣಾರೆ ಕಂಡದ್ದು ಸರಿ ಇಲ್ಲದೆ ಇರಬಹುದು ಎನ್ನುವ ವಿಚಾರವನ್ನು ಮನದಲ್ಲಿ ಇಟ್ಟು ನಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ನಾವು ಕಂಡದ್ದರ ಹಿಂದಿನ ಕಥೆ ಏನಿರಬಹುದು ಎಂದು ತಿಳಿ
ದುಕೊಳ್ಳುವ ಪ್ರಯತ್ನ ಅಗತ್ಯ. ಸಾವಧಾನದಿಂದ ವಿಚಾರಿಸಿ, ಸತ್ಯ ಪರಿಶೀಲಿಸಿ, ಪರಾಂಬರಿಸಿ ತಿಳಿದುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
#kannada #kannadagadegalu #kannadagaadegalu #kannadagade #kannadagaadegalu #ಕನ್ನಡ #ಕನ್ನಡಗಾದೆ #ಕನ್ನಡಗಾದೆಗಳು #kannadaproverbs #cbse #sslc #school #resourcesforstudents #materialsforstudents
Comments