ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ
ಬೆಕ್ಕು ಹೇಗೆ ಹಾಲು ಕುಡಿಯುತ್ತದೆ ಎಂದು ನೀವು ನೋಡಿದ್ದೀರಾ? ಹಾಲಿರುವ ತಟ್ಟೆಯ ಮುಂದೆ ಆರಾಮವಾಗಿ ಕುಳಿತು, ಕಣ್ಣು ಮುಚ್ಚಿ, ನಾಲಿಗೆ ಹೊರಚಾಚಿ, ರುಚಿಯನ್ನು ಸವಿಯುತ್ತಾ ಹಾಲನ್ನು ಕುಡಿಯುತ್ತದೆ. ಆದರೆ ಅದು ಕಣ್ಣು ಮುಚ್ಚುವುದು ಏಕೆ? ಸಾಕುಪ್ರಾಣಿಗಳಲ್ಲಿ ಬೆಕ್ಕಿನ ಚಾಣಾಕ್ಷತನ ಅತಿ ಹೆಚ್ಚು. ಅದೊಂದು ಬುದ್ಧಿವಂತ ಪ್ರಾಣಿ. ಕಣ್ಣು ಮುಚ್ಚಿ ದ್ದೇನೆ ಆದ್ದರಿಂದ, ತಾನು ಹಾಲನ್ನು ಕುಡಿಯುವುದನ್ನು ನೋಡಲಿಲ್ಲ . ಹಾಗೆ ಬೇರೆಯವರು ತಾನು ಕುಡಿಯುವುದನ್ನು ನೋಡಲಿಲ್ಲ ಎಂದು ಅದು ನಂಬಿರುತ್ತದೆ.. ಆದರೆ ಅದು ಕಣ್ಣು ಮುಚ್ಚಿ ಹಾಲು ಕುಡಿಯುವುದು ನಮಗೆ ಕಾಣುವುದಿಲ್ಲವೇ? ಅದು ಹಾಲನ್ನು ಚೆನ್ನಾಗಿ ಸವಿಯುವುದು ನಮಗೆ ತೋರದೆ? ಬೆಕ್ಕು ತನ್ನ ಕಳ್ಳತನ ಯಾರಿಗೂ ತಿಳಿಯದು ಎಂದು ನಂಬಿರುತ್ತದೆ. ತಾನು ನೋಡಲಿಲ್ಲ ಆದ್ದರಿಂದ ಯಾರು ನೋಡಲಿಲ್ಲ ಎಂದು ಮನಸ್ಸಿನಲ್ಲಿ ತಿಳಿಸಿರುತ್ತದೆ. ಮರುಭೂಮಿಯಲ್ಲಿ ಒಂದು ರೀತಿಯ ಹಕ್ಕಿರುತ್ತದೆ. ಮರಳಿನ ಸುಂಟರಗಾಳಿ ಬಂದಾಗ ಆ ಹಕ್ಕಿಯು ತನ್ನ ತಲೆಯನ್ನು ಮರಳಿನ ರಾಶಿಯೊಳಗೆ ಹುದುಗಿಕೊಳ್ಳುತ್ತದೆ. ತನ್ನ ಕಣ್ಣಿಗೆ ಕಾಣದು ಆದ್ದರಿಂದ ಸುಂಟರಗಾಳಿಯೇ ಇಲ್ಲ ಎನ್ನುವುದು ಅದರ ನಂಬಿಕೆ. ನಾವೂ, ಈ ಬೆಕ್ಕಿನಂತೆ, ಆ ಹಕ್ಕಿಯಂತೆ. ಕಷ್ಟಕಾಲ ಬಂದಾಗ ಅದನ್ನು ದಿಟ್ಟತನದಿಂದ ಎದುರಿಸುವುದನ್ನು ಮರೆತು, ಅದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತೇನೆ. ಹಾಗೆ ಮಾಡುತ್ತೇವೆ ಕೂಡ. ನಾವು ಅದರ ಬಗ್ಗೆ ಯೋಚಿಸಲಿಲ್ಲ ಮಾಡಲಿಲ್ಲ ಎಂದಾಕ್ಷಣ ಅದು ಮಾಯವಾಗಿ ಬಿಡುವುದು ಇಲ್ಲ. ಕಣ್ಣುಮುಚ್ಚಿದ ತಕ್ಷಣ ಕಷ್ಟಗಳು, ಕಳ್ಳತನವು ಮರೆಯಾಗುವುದು. ಮರೆಯಾಗುವುದು ಎಂದು ಮನುಷ್ಯನು ಅಂದುಕೊಂಡ ಸಂದರ್ಭದಲ್ಲಿ ಈ ಗಾದೆಯ ಬಳಕೆಸೂಕ್ತವಾಗಿದೆ. ಹಾಗೆ ಕಣ್ಣು ಮುಚ್ಚಿಕೊಂಡೇ ಇರುವುದನ್ನು ಬಿಟ್ಟು ಕಣ್ಣು ತೆರೆದು ತನ್ನ ಸುತ್ತಮುತ್ತಲಿನ ಆಗು-ಹೋಗುಗಳಿಗೆ ಗಮನ ಕೊಡಬೇಕಾದ ಬಗ್ಗೆ ಈ ಗಾದೆ ಉತ್ತೇಜನ ಹೇಳುತ್ತದೆ.
#kannadagaade#kannada#kannadalanguage#kannadagade#kannadagaadegalu#kannadagadegalu#kannadaproverbs#ಗಾದೆಗಳು#ಕನ್ನಡ#ಕನ್ನಡಗಾದೆಗಳು#ಕನ್ನಡಗಾದೆ
Comments