ಸಜ್ಜನರ ಸಂಘ ಹೆಜ್ಜೇನು ಸವಿದಂತೆ
ಈ ಪ್ರಕೃತಿಯಲ್ಲಿ ಎಲ್ಲವೂ ಶುಧ್ಧವಾಗಿಯೇ ಇರುತ್ತದೆ. ಆದರೆ ಮನುಷ್ಯನು ತನ್ನ ನಡತೆಯಿಂದಾಗಿ ಬಹುತೇಕ ಎಲ್ಲವನ್ನೂ ಕಲ್ಮಷಗೊಳಿಸಿದ್ದಾನೆ.
ಆದರೆ ಇದೊಂದನ್ನು ಅವನಿಗೆ ಕಲುಷಿತಗೊಳಿಸಲಾಗಲಿಲ್ಲ. ಅದು ಜೇನು ತುಪ್ಪ. ಜೇನು ನೊಣುವು ತುಂಬಾ ಪ್ರೀತಿಯಿಂದ ಹೂವಿಂದ ಹೂವಿಗೆ ಹಾರಿ ಸಂಗ್ರಹಿಸಿದ ಜೇನು ತುಪ್ಪವು ಪರಿಶುಧ್ಧವಾಗಿರುತ್ತದೆ.
ಇಂಥಾ ಶುಧ್ಧವಾದ ಜೇನಿನ ಒಂದು ಹನಿಯನ್ನು ನಮ್ಮ ಬಾಯಲ್ಲಿಟ್ಟರೆ ಎಷ್ಟು ಅಹ್ಲದಕರವಾಗಿರುತ್ತದೆ ಎಂದು ನೀವು ಕಲ್ಪಿಸಬಹುದು.
ಸಜ್ಜನರ ತುಂಬ ಮುಗ್ಧರಾಗಿದ್ದು ಅವರಲ್ಲಿ ಯಾವ ಕೆಟ್ಟ ಗುಣಗಳಿರುವುದಿಲ್ಲ, ಕೆಟ್ಟ ನಡತೆಗಳಿರುವುದಿಲ್ಲ. ಅವರು ಮನುಷ್ಯನ ನಿಷ್ಕಲ್ಮಷ ಮನೋಸ್ತಿಥಿಗೆ ಉದಾಹರಣೆಯಾಗಿರುತ್ತಾರೆ.
ಅಂಥಾ ಸಜ್ಜನರ ಒಡನಾಟವನ್ನು ನಾವು ಮಾಡಿದರೆ ಅದರಿಂದ ಆಗುವ ಸಂತೋಷವನ್ನು ಜೇನನ್ನು ಸವಿಯುವುದಕ್ಕೆ ಹೋಲಿಸಬಹುದಾಗಿದೆ.
ಸತ್ಸಂಗತ್ವೆ ನಿಸ್ಸಂಘತ್ವಂ ಎಂದು ಶಂಕರಾಚಾರ್ಯರು ಹೇಳಿದಂತೆ, ಸತ್ ಸಂಘವು ನಮ್ಮ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಸಜ್ಜರ ಒಡನಾಟದಿಂದ ನಮ್ಮ ಶ್ರೇಯಸ್ಸು ಖಂಡಿತ ಎಂಬುವುದಯ ಈ ಗಾದೆಯ ಗುಟ್ಟು.
Comments